ಸಿನಿಮಾ ಸುದ್ದಿ

ಕನ್ನಡ ನಟನ ಮೇಲೆ ತಮಿಳು ನಟ ವೆಮಲ್ ಹಲ್ಲೆ: ಪ್ರಕರಣ ದಾಖಲು!

ಕನ್ನಡ ನಟನ ಮೇಲೆ ಹಲ್ಲೆ ನಡೆಸಿದ ತಮಿಳು ನಟನ ವಿರುದ್ಧ ಪ್ರಕರಣ ದಾಖಲಾಗಿದೆ.

ಕನ್ನಡ ನಟನ ಮೇಲೆ ತಮಿಳು ನಟ ವೆಮಲ್ ಹಲ್ಲೆ: ಪ್ರಕರಣ ದಾಖಲು!
ಕನ್ನಡ ನಟನ ಮೇಲೆ ತಮಿಳು ನಟನಿಂದ ಹಲ್ಲೆ: ಪ್ರಕರಣ ದಾಖಲು!
Published On :
ಚೆನ್ನೈ: ಕನ್ನಡ ನಟನ ಮೇಲೆ ಹಲ್ಲೆ ನಡೆಸಿದ ತಮಿಳು ನಟನ ವಿರುದ್ಧ ಪ್ರಕರಣ ದಾಖಲಾಗಿದೆ. 
ವಿರುಗಂಬಕ್ಕಂ ನಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.09 ರಂದು  ಸರ್ವಿಸ್ ಅಪಾರ್ಟ್ ಮೆಂಟ್ ಗೆ ತಮಿಳು ನಟ ವೆಮಲ್ ಹಾಗೂ ಆತನ ನಾಲ್ವರು ಸ್ನೇಹಿತರು ತೆರಳಿದ್ದರು. ಅದೇ ಅಪಾರ್ಟ್ ಮೆಂಟ್ ನಲ್ಲಿ ಕನ್ನಡದ ನಟ ಅಭಿಷೇಕ್ ಸಹ ಇದ್ದರು. ಇಬ್ಬರೂ ನಟರು ತಮ್ಮ ಸ್ನೇಹಿತರೊಂದಿಗೆ ಇದ್ದಾಗ ಹಲ್ಲೆಯ ಘಟನೆ ನಡೆದಿದೆ. ಈ ವೇಳೆ ಬಂದ ವೇಮಲ್ ಅಭಿಷೇಕ್ ಬಳಿ ಏನನ್ನೋ ಕೇಳಿದ್ದಾರೆ, ಆದರೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದ ಅಭಿಷೇಕ್ ಇದಕ್ಕೆ ಸ್ಪಂದಿಸಲಿಲ್ಲ. ಇದರಿಂದ ತಮಿಳುನಟ ಕೋಪಗೊಂಡಿದ್ದರ ಪರಿಣಾಮ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿ, ನಂತರ ತಮಿಳುನಟ ಹಲ್ಲೆ ನಡೆಸಿದ್ದಾರೆ. 
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ವೆಮಲ್ ಖ್ಯಾತ ನಟರಾಗಿದ್ದು ಪಸಂಗ, ಕಲವನಿ, ವಾಗೈಸೂಡ ವಾ ಹಾಗೂ ಕಲಲಪ್ಪು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.