ದರ್ಶನ್ ಅವರೇ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ ಅಂದರೆ ಆನೆಬಲ ಬಂದಂತೆ: ಕಿಚ್ಚ ಸುದೀಪ್
ಕಾಂಗ್ರೆಸ್ ಟಿಕೆಟ್ ಸಿಗದಿದ್ದರು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ನಿರ್ಣಯ ಮಾಡಿದ್ದು ಇದೇ ವೇಳೆ ಚಾಲೆಂಜಿಂಗ್...

Published On :
ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಗದಿದ್ದರು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ನಿರ್ಣಯ ಮಾಡಿದ್ದು ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ ಅಂದ ಮೇಲೆ ಆನೆ ಬಲ ಬಂದಂತೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡ್ತೀರಾ ಎನ್ನುವ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಅವರು ಈಗಾಗಲೇ ದರ್ಶನ್ ಅಲ್ಲಿದ್ದಾರೆ. ಅಂದ ಮೇಲೆ ಯಾರ ಅವಶ್ಯಕತೆನೂ ಇಲ್ಲ. ಅವನು ಎಲ್ಲಾ ನೋಡಿಕೊಳ್ಳುತ್ತಾನೆ. ನನಗೆ ಇನ್ನೂ ಯಾರಿಂದಲೂ ಬುಲಾವ್ ಬಂದಿಲ್ಲ ಎಂದು ಹೇಳಿದರು.
ಅಲ್ಲದೆ ನನಗೆ ರಾಜಕೀಯದ ಬಗ್ಗೆ ಅಷ್ಟೇನೂ ಅಸಕ್ತಿ ಇಲ್ಲ. ನನ್ನನ್ನು ನಂಬಿ ತುಂಬಾ ನಿರ್ಮಾಪಕರು ದುಡ್ಡು ಹಾಕಿದ್ದಾರೆ. ಹೀಗಾಗಿ ನನ್ನ ಸಪೋರ್ಟ್ ನಿರ್ಮಾಪಕರಿಗೆ ಎಂದ ಕಿಚ್ಚ ಸುದೀಪ್, ಅಂಬರೀಶ್ ಹೆಸರೊಂದೆ ಸಾಕು ಗೆಲ್ಲೋಕೆ. ಅದರ ಜತೆ ದರ್ಶನ್ ಒಬ್ಬರೇ ಸಾಕು ಗೆಲುವು ಪಡೆಯೋಕೆ ಅಂತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Darshanಮಂಡ್ಯದರ್ಶನ್Mandyaಕಿಚ್ಚ ಸುದೀಪ್Kiccha sudeepSumalatha Ambareeshಲೋಕಸಭೆ ಚುನಾವಣೆ 2019ಸುಮಲತಾ ಅಂಬರೀಶ್LS Polls 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


