ಸಿನಿಮಾ ಸುದ್ದಿ

'ಜಂಗ್ಲಿ' ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ಕನ್ನಡದ ಹುಡುಗಿ ಆಶಾ ಭಟ್

ವಿಜೇತೆಯೊದ ಮೊದಲ ಭಾರತೀಯೆ ಆಶಾ ಭಟ್ ಮೂಲತಃ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ...

'ಜಂಗ್ಲಿ' ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ಕನ್ನಡದ ಹುಡುಗಿ ಆಶಾ ಭಟ್
ಆಶಾ ಭಟ್
Published On :
ಮಿಸ್ ಸೂರಪ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾದ ಮೊದಲ ಭಾರತೀಯಳಾದ ಆಶಾ ಭಟ್ ಮೂಲತಃ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ಇದೀಗ ಗ್ಲಾಮರ್ ವರ್ಲ್ಡ್ ಗೆ ಕಾಲಿಡುತ್ತಿದ್ದಾರೆ. ರೂಪದರ್ಶಿಯಿಂದ ನಟಿಯಾಗಿ ಭದ್ರಾವತಿಯಿಂದ ಹಾಲಿವುಡ್ ಮೂಲಕ ಬಾಲಿವುಡ್ ಗೆ ಪ್ರಯಾಣ ಬೆಳೆಸುತ್ತಿರುವ ಆಶಾ ಭಟ್ ರವರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದಿದೆ.
ಜಂಗ್ಲಿ ಚಿತ್ರದ ಮೂಲಕ ಆಶಾ ಭಟ್ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ. ವಿದ್ವತ್ ಜಮ್ಮವಾಲ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಜಂಗ್ಲಿ ಪಿಕ್ಚರ್ಸ್ ನಡಿ ತಯಾರಾಗುತ್ತಿರುವ ಚಿತ್ರವನ್ನು ಅಮೆರಿಕಾ ಮೂಲದ ಚುಕ್ ರುಸ್ಸೆಲ್ಲ್ ನಿರ್ದೇಶಿಸುತ್ತಿದ್ದಾರೆ.
ತಮ್ಮ ಪೋಷಕರು, ಸೋದರಿ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ಬಾಲಿವುಡ್ ಪ್ರವೇಶಿಸುವ ಬಗ್ಗೆ ನಿರ್ಧಾರ ಮಾಡಿದೆವು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಟಿ ವಿ ಜಾಹಿರಾತುಗಳಿಗೆ ಆಡಿಷನ್ ನಲ್ಲಿ ಕೂಡ ಭಾಗಿಯಾದೆ. ನೃತ್ಯಗಾರ್ತಿಯಾಗಿ, ಹಾಡುಗಾರ್ತಿಯಾಗಿ ಮತ್ತು ರಂಗಭೂಮಿ ಹಿನ್ನಲೆಯಿರುವ ಕಾರಣ ಚಿತ್ರದಲ್ಲಿ ಯಾಕೆ ಪ್ರಯತ್ನಿಸಬಾರದು ಎಂದು ನನ್ನ ಕುಟುಂಬದವರಿಗೆ ಕೂಡ ಅನಿಸಿತು. ಚಿತ್ರರಂಗದ ಬಗ್ಗೆ ಯೋಚಿಸುವಾಗ ಮಾರ್ಷಲ್ ಆರ್ಟ್ಸ್ ಮತ್ತು ಡ್ಯಾನ್ಸಿಂಗ್ ಕೂಡ ಕಲಿತುಕೊಂಡೆ. ಒಂದು ದಿನ ಆಡಿಶನ್ ಗೆ ನನ್ನನ್ನು ಕರೆದರು, ಅಲ್ಲಿ ಆಯ್ಕೆಯಾದೆ ಎಂದು ತಮ್ಮ ಬಾಲಿವುಡ್ ಪ್ರವೇಶದ ಬಗ್ಗೆ ಆಶಾ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.