ಸಿನಿಮಾ ಸುದ್ದಿ

'ಅಮ್ಮನ ಮನೆ' ಶೀರ್ಷಿಕೆಯನ್ನು ರಾಘಣ್ಣ ತುಂಬಾ ಇಷ್ಟಪಟ್ಟರು: ನಿಖಿಲ್ ಮಂಜು

ಅಮ್ಮನ ಮನೆ ಚಿತ್ರದ ಮೂಲಕ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ...

'ಅಮ್ಮನ ಮನೆ' ಶೀರ್ಷಿಕೆಯನ್ನು ರಾಘಣ್ಣ ತುಂಬಾ ಇಷ್ಟಪಟ್ಟರು: ನಿಖಿಲ್ ಮಂಜು
ಅಮ್ಮನ ಮನೆ ಚಿತ್ರದ ದೃಶ್ಯ
Published On :
ಅಮ್ಮನ ಮನೆ ಚಿತ್ರದ ಮೂಲಕ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ನಿಖಿಲ್ ಮಂಜು ನಿರ್ದೇಶನದ ಚಿತ್ರದ ಕಥೆ ಬರೆಯುವಾಗ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಥೆ ಬರೆದಿದ್ದರಂತೆ.
ನನ್ನ ತಂದೆಗೆ ಪಕ್ಷವಾತವಾಗಿ ಅವರು ಪಟ್ಟ ಕಷ್ಟವನ್ನು ತೆರೆ ಮೇಲೆ ರಾಘಣ್ಣ ಮೂಲಕ ತೋರಿಸುತ್ತಿದ್ದೇನೆ. ಇದರಲ್ಲಿ ತಾಯಿ-ಮಗನ ನಡುವಿನ ಭಾವನಾತ್ಮಕ ದೃಶ್ಯಗಳು ಕೂಡ ಇವೆ ಎನ್ನುತ್ತಾರೆ ಅವರು.
ಚಿತ್ರದಲ್ಲಿ ಎರಡು ಪಾತ್ರಗಳು ಒಟ್ಟೊಟ್ಟಿಗೆ ಮುಖ್ಯವಾಗಿ ಸಾಗುತ್ತದೆ. ರಾಜೀವ ಎನ್ನುವ ಪಾತ್ರವನ್ನು ರಾಘಣ್ಣ ನಿಭಾಯಿಸಿದ್ದು ಅವರು ಪಿಟಿ ಟೀಚರ್. ಆ ಪಾತ್ರ ವೃತ್ತಿ ಮತ್ತು ಕೌಟುಂಬಿಕ ಜೀವನವನ್ನು ಹೇಗೆ ಸಮತೋಲನದಿಂದ ತೆಗೆದುಕೊಂಡು ಹೋಗುತ್ತದೆ ಎಂದು ತೋರಿಸಲಾಗಿದೆ. ಚಿತ್ರದ ಶೀರ್ಷಿಕೆಯನ್ನು ಹೇಳಿದಾಗ ರಾಘಣ್ಣ ಖುಷಿಪಟ್ಟು ನನ್ನನ್ನು ಬಿಗಿದಪ್ಪಿದರು ಎಂದರು ನಿರ್ದೇಶಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.