ಸಿನಿಮಾ ಸುದ್ದಿ

ಸಿಂಪ್ಲಿ ಸೂಪರ್ಬ್ : ಗಣೇಶ್ ನಟನೆಯ 99 ಚಿತ್ರದ 'ಹೀಗೆ ದೂರ' ಹಾಡಿಗೆ ಕಿಚ್ಚ ಸುದೀಪ್ ಮೆಚ್ಚುಗೆ

ಗೋಲ್ಡನ್ ಸ್ಟಾರ್ ಗಣೇಶ್ ನಟಮನೆಯ ಪ್ರೀತಂ ಗುಬ್ಬಿ ನಿರ್ದೇಶನದ 99 ಸಿನಿಮಾದ ಹಾಡು ಶಿವರಾತ್ರಿಯಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಿಂಪ್ಲಿ ಸೂಪರ್ಬ್ : ಗಣೇಶ್ ನಟನೆಯ 99 ಚಿತ್ರದ 'ಹೀಗೆ ದೂರ' ಹಾಡಿಗೆ ಕಿಚ್ಚ ಸುದೀಪ್ ಮೆಚ್ಚುಗೆ
99 ಸಿನಿಮಾ ಸ್ಟಿಲ್
Published On :
ಗೋಲ್ಡನ್ ಸ್ಟಾರ್ ಗಣೇಶ್  ನಟಮನೆಯ ಪ್ರೀತಂ ಗುಬ್ಬಿ ನಿರ್ದೇಶನದ 99 ಸಿನಿಮಾದ ಹಾಡು ಶಿವರಾತ್ರಿಯಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡಿಗೆ ವಿಜಯ್ ಪ್ರಕಾಶ್ ಹಿನ್ನೆಲೆ ಗಾಯನವಿದೆ. ಬಿಡುಗಡೆಯಾಗಿರುವ ಈ ಹಾಡಿಗೆ ರಾಜ್ಯಾದ್ಯಂತ  ಅಭಿಮಾನಿಗಳು ಸೆಲೆಬ್ರಿಟಿಗಳು ಪ್ರಶಂಸಿದ್ದಾರೆ,
ಈ ವಿಷಯವನ್ನು ಗಣೇಶ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮೊದಲ ಫೀಡ್ ಬ್ಯಾಕ್ ಅನ್ನು ನಟ ಸುದೀಪ್ ನೀಡಿದ್ದಾರೆ, ಸಿಂಪ್ಲಿ ಸೂಪರ್ಬ್, ಹಾಡಿನ ಪ್ರತಿಯೊಂದು ಸಾಲು ಸುಂದರವಾಗಿದೆ, ಅತ್ಯದ್ಭುತ ಸಂಗೀತ ಸಂಯೋಜನೆ, 99 ತಂಡಕ್ಕೆ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. 
ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ತ್ರಿಶಾ ಹಾಗೂ ವಿಜಯ್ ಸೇತುಪತಿ ಅಭಿಯನದ '99' ಇದೀಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ.
 99 ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರಿಗೆ ಇದು 100 ನೇ ಚಿತ್ರ ಕೂಡ ಹೌದು,... ತಮಿಳಿನಲ್ಲಿ ತ್ರಿಶಾ ಮಾಡಿದ ಪಾತ್ರಕ್ಕೆ ಇದೀಗ ಕನ್ನಡದಲ್ಲಿ ಜಾಕಿ ಭಾವನಾ ಜೀವ ತುಂಬಲಿದ್ದಾರೆ. ಈ ಮೂಲಕ ಗಣೇಶ್ ಮತ್ತು ಭಾವನಾ ಜೋಡಿಯ 2ನೇ ಸಿನಿಮಾ ಇದಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.