ಸಿನಿಮಾ ಸುದ್ದಿ

ಹೊಸ ನಿರ್ದೇಶಕರಿಗೂ ಮತ್ತು ನನಗೂ ತುಂಬಾ ವ್ಯತ್ಯಾಸವಿದೆ: 'ರುಸ್ತುಂ' ರವಿವರ್ಮಾ

23 ವರ್ಷಗಳ ಕಾಲ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ರವಿ ವರ್ಮಾ ರುಸ್ತುಂ ಸಿನಿಮಾ ಮೂಲಕ ಚಿತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಹೊಸ ನಿರ್ದೇಶಕರಿಗೂ ಮತ್ತು ನನಗೂ ತುಂಬಾ ವ್ಯತ್ಯಾಸವಿದೆ: 'ರುಸ್ತುಂ' ರವಿವರ್ಮಾ
ರುಸ್ತುಂ ಸಿನಿಮಾ ಸ್ಟಿಲ್
Published On :
23 ವರ್ಷಗಳ ಕಾಲ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ರವಿ ವರ್ಮಾ ರುಸ್ತುಂ ಸಿನಿಮಾ ಮೂಲಕ ಚಿತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಜೂನ್ 28 ರಂದು ರಿಲೀಸ್ ಆಗಲಿರುವ ರುಸ್ತುಂ ಸಿನಿಮಾ ಜಯಣ್ಣ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ,
ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾ ರಂಗದ ಹಲವು ನಟರುಗಳ ಜೊತೆ ರವಿವರ್ಮಾ ಕೆಲಸ ಮಾಡಿದ್ದಾರೆ, ಕಳೆದ 23 ವರ್ಷಗಳಿಂದ ಸಿನಿಮಾರಂಗದಲ್ಲಿದ್ದಾರೆ, ನಿರ್ದೇಶಕನಾಗಬೇಕೆಂದು 10 ವರ್ಷಗಳ ಹಿಂದೆಯೇ ನಿರ್ದರಿಸಿದ್ದೆ, ಆದರೆ ನಿರ್ದೇಶಕನಾಗುವುದು ಅಷ್ಟು ಸುಲಭದ ಕೆಲಸ ಎಂದು ನನಗೆ ತಿಳಿಯಿತು, ನಿರ್ದೇಶಕನಿಗೆ ಇಡೀ ಪ್ರಾಜೆಕ್ಟ್ ಜವಾಬ್ದಾರಿಯಿರುತ್ತದೆ ಎಂದು ರವಿ ಹೇಳಿದ್ದಾರೆ.
ಸದ್ಯ ಚೆನ್ನೈನಲ್ಲಿರುವ ರವಿ ವರ್ಮಾ ಸಿನಿಮಾದ ಅಂತಿಮ ಹಂತದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ, ನಿರ್ದೇಶಕನಾಗಿ ನಾನು ಕೊನೆಯ ಹಂತದ ಕೆಲಸ ಮಾಡುತ್ತಿದ್ದೇನೆ, ಇಡಿ ತಂಡದ ಕೆಲಸದಿಂದ ಸಿನಿಮಾ ಬೇಗ ಪೂರ್ಣವಾಯಿತು ಎಂದು ತಿಳಿಸಿದ್ದಾರೆ,
ಹೊಸ ನಿರ್ದೇಶಕರಿಗೂ ನನಗೂ ತುಂಬಾ ವ್ಯತ್ಯಾಸಗಳಿವೆ. ಈ ಸಿನಿಮಾ ಪ್ರತಿಯೊಬ್ಬರಿಗೂ ರೀಚ್ ಆಗುತ್ತದೆ,ರುಸ್ತುಂ ಮನರಂಜನೆಯ ಸಿನಿಮಾವಾಗಿದೆ,ಟ್ರೇಲರ್ ಎಲ್ಲಾ ವರ್ಗದ ವೀಕ್ಷಕರಿಗೂ ಇಷ್ಟವಾಗಿದೆ, ವಿವಿಧ ಭಾಷೆಗಳ ಜನರ ಜೊತೆ ಕೆಲ ಮಾಡಿದ್ದೇನೆ, ನನ್ನ ತಂದೆ ಸಬ್ ಇನ್ಸ್ ಪೆಕ್ಟರ ಆಗಿದ್ದವರು, ನನ್ನ ಕುಟುಂಬದ ಬಹುತೇಕ ಮಂದಿ ಪೊಲೀಸ್ ಇಲಾಖೆಯಲ್ಲಿದ್ದಾರೆ, ನಾನು ಕೂಡ ಪೊಲೀಸ್ ಆಗಬೇಕೆಂದುಕೊಂಡಿದ್ದೆ, ಆದರೆ ಬ್ಯುಸಿನೆಸ್ ಗೆ ಇಳಿದೆ ಎಂದು ಹೇಳಿದ್ದಾರೆ.
ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿರುವ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.