ರಿಲೀಸ್ ಆಗಿ 20 ವರ್ಷ: ಬರಲಿದೆಯೇ ಸೂರ್ಯವಂಶ-2; ನಿರ್ದೇಶಕ ನಾರಾಯಣ್ ಹೇಳಿದ್ದೇನು?
ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ 2000 ಇಸವಿ ಜೂನ್ 15ರಂದು ರಿಲೀಸ್ ಆಗಿತ್ತು, ಅಂದರೆ ಇಂದಿಗೆ ಸುಮಾರು 20 ವರ್ಷ. ನಿರ್ದೇಶಕ ಎಸ್.ನಾರಾಯಣ್ ...

Published On :
ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ 2000 ಇಸವಿ ಜೂನ್ 15ರಂದು ರಿಲೀಸ್ ಆಗಿತ್ತು, ಅಂದರೆ ಇಂದಿಗೆ ಸುಮಾರು 20 ವರ್ಷ. ನಿರ್ದೇಶಕ ಎಸ್.ನಾರಾಯಣ್ ಬ್ಲಾಕ್ ಬಸ್ಟರ್ ಸಿನಿಮಾದ ಹಲವು ಮಧುರ ಕ್ಷಣಗಳ ಬಗ್ಗೆ ಮೆಲುಕು ಹಾಕಿದ್ದಾರೆ.
ಸೆನ್ಸೇಷನಲ್ ಸಿನಿಮಾ ಸೂರ್ಯವಂಶ ಹಲವರಿಗೆ ಬ್ರೇಕ್ ನೀಡಿತ್ತು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಚೊಚ್ಚಲ ನಿರ್ಮಾಣದ ಸೂರ್ಯವಂಶ ಸಿನಿಮಾ ನೂರಾರು ಜನರಿಗೆ ದಾರಿ ಮಾಡಿಕೊಟ್ಟಿತ್ತು.
ಜನಪ್ರಿಯ ನಟ ವಿಷ್ಣುವರ್ಧನ್ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಸಿನಿಮಾದಲ್ಲಿ ನಟಿಸಿದ್ದರು. ಹಲವು ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದ್ದರು. ನನ್ನ ವೃತ್ತಿ ಜೀವನದಲ್ಲಿ ಈ ಸಿನಿಮಾ ಕಮರ್ಷಿಯಲ್ ಸಕ್ಸಸ್ ನೀಡಿತ್ತು, ಬಾಕ್ಸ್ ಆಪೀಸ್ ಕಲೆಕ್ಷನ್ ನಲ್ಲಿ ಅತಿ ಹೆಚ್ಚು ಗಳಿಸಿತ್ತು, ವಿಷ್ಣು ವರ್ದನ್ ಅವರ ಎಲ್ಲಾ ಸಿನಿಮಾಗಳಿಗಿಂತಲೂ ಹೆಚ್ಚು ಈ ಸಿನಿಮಾದಲ್ಲಿ ಕಲೆಕ್ಷನ್ ಆಗಿತ್ತು.
ಇಷಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದರು, ಕನ್ನಡ ಚಿತ್ರರಂಗದಲ್ಲೇ ಸೂರ್ಯವಂಶ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು, ಝೆಂಕಾರ್ ಬೀಟ್ಸ್ ಲೇಬಲ್ ಅಡಿಯಲ್ಲಿ ಹಾಡುಗಳು ರಿಲೀಸ್ ಆಗಿತ್ತು. ಅದು ಬಿಗ್ ಹಿಟ್ ಆಗಿತ್ತು ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.
ಒಂದು ವೇಳೆ ಸೂರ್ಯವಂಶ ಭಾಗ2 ಮಾಡಬೇಕೆಂದು ಕುಮಾರಸ್ವಾಮಿ ನಿರ್ಧರಿಸಿದರೇ ಇತಿಹಾಸ ಮರುಕಳಿಸುತ್ತದೆ. ಅವರು ಸೂರ್ಯವಂಶ ಸಿನಿಮಾ ಭಾಗ 2 ಮಾಡಿದರೇ ನನ್ನ ಕನಸು ನನಸಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


