ನಾನು ಬೋಲ್ಡ್ ಆಗಿ ನಟಿಸಲು ಉಪೇಂದ್ರ ಕಾರಣ ಹೇಳಿಕೆಗೆ ಪ್ರಿಯಾಂಕಾ ಗರಂ, ಇದಕ್ಕೆ ರಚಿತಾ ರಾಂ ಹೇಳಿದ್ದೇನು?
ಐ ಲವ್ ಯೂ ಚಿತ್ರದ ಹಾಟ್ ಹಾಡೊಂದರಲ್ಲಿ ನಾನು ಹಾಟ್ ಆಗಿ ಕಾಣಿಸಿಕೊಳ್ಳಲು ಉಪೇಂದ್ರ ಶೂಟಿಂಗ್ ಕಾರಣ ಎಂದು ನಟಿ ರಚಿತಾ ರಾಂ ಹೇಳಿದ್ದು ಇದಕ್ಕೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಗರಂ...

Published On :
ಬೆಂಗಳೂರು: ಐ ಲವ್ ಯೂ ಚಿತ್ರದ ಹಾಟ್ ಹಾಡೊಂದರಲ್ಲಿ ನಾನು ಹಾಟ್ ಆಗಿ ಕಾಣಿಸಿಕೊಳ್ಳಲು ಉಪೇಂದ್ರ ಶೂಟಿಂಗ್ ಕಾರಣ ಎಂದು ನಟಿ ರಚಿತಾ ರಾಂ ಹೇಳಿದ್ದು ಇದಕ್ಕೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದು ಈ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೆ ರಚಿತಾ ಸ್ಪಷ್ಟನೆ ನೀಡಿದ್ದಾರೆ.
ಉಪೇಂದ್ರ ಅವರು ಹಾಡಿನ ನಿರ್ದೇಶನ ಮಾಡಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಿರ್ದೇಶನದಲ್ಲಿ ಉಪ್ಪಿ ಸರ್ ಕಿಂಗ್ ಆಗಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಐ ಲವ್ ಯೂ ಚಿತ್ರದ ಹಾಡೊಂದರಲ್ಲಿ ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ನನ್ನ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಇನ್ನು ಮುಂದೆ ಈ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು ಸದ್ಯ ಆಗಿ ಹೋಗಿರುವುದಕ್ಕೆ ನಾನು ಏನು ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಹಾಟ್ ಆಗಿ ಕಾಣಿಸಿಕೊಂಡಿರುವ ರಚಿತಾ ರಾಂ ಪ್ರತಿಯೊಂದು ಸಂದರ್ಶನದಲ್ಲೂ ಉಪೇಂದ್ರ ಹೆಸರನ್ನು ತರುತ್ತಿದ್ದಾರೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಹೇಳಿಕೊಳ್ಳಲಿ. ಅದನ್ನು ಬಿಟ್ಟು ಪದೇ ಪದೇ ಉಪೇಂದ್ರ ಹೆಸರು ಹೇಳುವುದು ಯಾಕೆ? ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ. ಇನ್ನು ಹಾಡಿನ ಕೊರಿಯೋಗ್ರಾಫಿ ಮಾಡಿರುವುದು ಚಿನ್ನಿ ಪ್ರಕಾಶ್, ಆದರೆ ರಚಿತಾ ಮಾತರ್ ಉಪೇಂದ್ರ ನಿರ್ದೇಶಕರಾಗಿದ್ದಾರೆ ಎನ್ನುತ್ತಿದ್ದಾರೆ ಎಂದು ಪ್ರಿಯಾಂಕಾ ಕಿಡಿಕಾರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Upendraಉಪೇಂದ್ರSandalwoodಸ್ಯಾಂಡಲ್ವುಡ್I Love YouPriyanka Upendraಪ್ರಿಯಾಂಕಾ ಉಪೇಂದ್ರRachitha Ramಐ ಲವ್ ಯೂರಚಿತಾ ರಾಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


