'ವೇರ್ ಈಸ್ ಮೈ ಕನ್ನಡಕ' ಚಿತ್ರ ಕೈಬಿಟ್ಟ ಗಣೇಶ್, ಬದಲಿ ನಾಯಕರಾರು ಗೊತ್ತಾ?
ಕನ್ನಡ ಚಿತ್ರ ಪ್ರೇಮಿಗಳ್ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದ್ದ "ವೇರ್ ಈಸ್ ಮೈ ಕನ್ನಡಕ" ಚಿತ್ರದ ನಾಯಕ ಬದಲಾಗಿದ್ದಾನೆ.

Published On :
ಕನ್ನಡ ಚಿತ್ರ ಪ್ರೇಮಿಗಳ್ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದ್ದ "ವೇರ್ ಈಸ್ ಮೈ ಕನ್ನಡಕ" ಚಿತ್ರದ ನಾಯಕ ಬದಲಾಗಿದ್ದಾನೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಲಿದ್ದಾರೆ ಎಂದು ಹೇಳಲಾಗಿದ್ದ ಚಿತ್ರಕ್ಕೀಗ "ಮನಸಾರೆ" ಖ್ಯಾತಿಯ ದಿಗಂತ್ ಬಂದಿದ್ದಾರೆ.
ಈ ಮುನ್ನ ಗಣೇಶ್ ಡೇಟ್ಸ್ ಹೊಂದಾಣಿಕೆಯಾಗದೆ ಇದ್ದ ಕಾರಣ ಚಿತ್ರದ ಚಿತ್ರೀಕರಣ ಮುಂಡೂಡಿದ್ದರು. ಆದರೆ ಈಗ ಅವರು ಚಿತ್ರವನ್ನು ಕೈಬಿಟ್ಟಿದ್ದಾರೆ.ಆ ವೇಳೆ ಗಣೇಶ್ ಸ್ವತಃ ದಿಗಂತ್ ಈ ಪಾತ್ರಕ್ಕೆ ಸೂಕ್ತವೆಂದು ಚಿತ್ರ ನಿರ್ಮಾಪಕರಿಗೆ ಸೂಚಿಸಿದ್ದಾರೆ.
"ವೇರ್ ಈಸ್ ಮೈ ಕನ್ನಡಕ" ಪತ್ರಲೇಖಾ ಹಾಗೂ ಅರ್ಬಾಜ್ ಖಾನ್ ಅವರ ಫಾಲಿಗೆ ಚೊಚ್ಚಲ ಕನ್ನಡ ಚಿತ್ರವಾಗಿದೆ. ದಿಗಂತ್ ತಮ್ಮ ಚಿತ್ರದಲ್ಲಿ ಅಭಿನಯಿಸುವ ವಿಚಾರವನ್ನು ಶೀಘ್ರವೇ ಚಿತ್ರನಿರ್ಮಾಪಕರು ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ. ಅಲ್ಲದೆ ಚಿತ್ರೀಕರಣ ಎಂದಿನಿಂದ ಪ್ರಾರಂಭವಾಗಲಿದೆ ಎನ್ನುವುದನ್ನೂ ಸಹ ಅವರು ಇನ್ನಷ್ಟೇ ಹೇಳಬೇಕಿದೆ.
ಚಿತ್ರದ ಬಹುಮುಖ್ಯ ಭಾಗಗಳನ್ನು ಲಂಡನ್, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲು ಚಿತ್ರತಂಡ ಯೋಜಿಸಿದೆ.ಸಧ್ಯ ದಿಗಂತ್ "ಹುಟ್ಟುಹಬ್ಬದ ಶುಭಾಶಯಗಳು" ಚಿತ್ರದ ಶೂಟಿಂಗ್ ನಲ್ಲಿದ್ದು ಪುನೀತ್ ರಾಜ್ ಕುಮಾರ್ ಅಭಿನಯದ "ಯುವರತ್ನ" ಚಿತ್ರದಲ್ಲಿಯೂ ಮಹತ್ವದ ಪಾತ್ರ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arbaaz Khanಅರ್ಬಾಜ್ ಖಾನ್Ganeshಗಣೇಶ್ದಿಗಂತ್DiganthWhere Is My Kannadakaವೇರ್ ಈಸ್ ಮೈ ಕನ್ನಡಕPatralekhaಪತ್ರಲೇಖ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


