ಸಿನಿಮಾ ಸುದ್ದಿ

ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನ

ಬಿಡುಗಡೆಯಾಗಿ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲೋಹಿತ್ ಹೆಚ್ ನಿರ್ದೇಶನದ ಕನ್ನಡ ಚಿತ್ರ "ದೇವಕಿ" ಆಗಸ್ಟ್ 4 ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ.

ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನ
ದೇವಕಿ
Published On :
ಬಿಡುಗಡೆಯಾಗಿ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ  ಲೋಹಿತ್ ಹೆಚ್ ನಿರ್ದೇಶನದ ಕನ್ನಡ ಚಿತ್ರ "ದೇವಕಿ" ಆಗಸ್ಟ್ 4 ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರವು ಪ್ರಥಮ ಅಂತರಾಷ್ಟ್ರೀಯ ಪ್ರದರ್ಶನ ಕಾಣುತ್ತಿದೆ.
ಮಹಿಳಾ ಕೇಂದ್ರಿತ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ ಅವರು ಪತಿ ಉಪೇಂದ್ರ ಅವರೊಂದಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಚಿತ್ರ ತಯಾರಕರು ಚಿತ್ರದ ಜಾಗತಿಕ ಬಿಡುಗಡೆಗೆ ಸಿದ್ದವಾಗಿದ್ದಾರೆ.ಇದಕ್ಕಾಗಿ ಚಿತ್ರ ವಿತರಕರೊಡನೆ ಚರ್ಚೆಗಳು  ನಡೆದಿದೆ.
ವಿಮರ್ಶಾತ್ಮಕ ಮೆಚ್ಚುಗೆಗೆ ತೆರೆದುಕೊಂಡ ಈ ಚಿತ್ರದಲ್ಲಿ ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯಾ ಮತ್ತು ನಟ ಕಿಶೋರ್ ಸಹ ಅಭಿನಯಿಸಿದ್ದಾರೆ. ನೋಬಿನ್ ಪಾಲ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೆ ಎಚ್ ಸಿ ವೇಣು ಛಾಯಾಗ್ರಹಣ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.