ಸಿನಿಮಾ ಸುದ್ದಿ

ಡಿ ಬಾಸ್ ಮುಂದೆ ನಾನಿನ್ನು ಜ್ಯೂನಿಯರ್, ಅವರ ಬಗ್ಗೆ ಅಪಾರ ಗೌರವವಿದೆ: ಅಭಿ- ನಾನು ಚೆನ್ನಾಗಿದ್ದೇವೆ'

ಬಹುತಾರಾಗಣದ, ಅದ್ದೂರಿ ವೆಚ್ಚದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಆಡಿಯೋ, ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿದೆ...

ಡಿ ಬಾಸ್ ಮುಂದೆ ನಾನಿನ್ನು ಜ್ಯೂನಿಯರ್, ಅವರ ಬಗ್ಗೆ ಅಪಾರ ಗೌರವವಿದೆ: ಅಭಿ- ನಾನು ಚೆನ್ನಾಗಿದ್ದೇವೆ'
ದರ್ಶನ್, ಅಭಿಷೇಕ್, ನಿಖಿಲ್
Published On :
ಬೆಂಗಳೂರು: ಬಹುತಾರಾಗಣದ, ಅದ್ದೂರಿ ವೆಚ್ಚದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಆಡಿಯೋ, ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿದೆ. ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಅದಕ್ಕಾಗಿ ಡಬ್ಬಿಂಗ್ ಗಾಗಿ ನಟ ನಿಖಿಲ್ ಕುಮಾರ್ ತೆರಳಿದ್ದರು.
ಈ ವೇಳೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು,  ಡಿ ಬಾಸ್ ಬಗ್ಗೆ ನನಗೆ ಅಪಾರ ಗೌರವವಿದೆ. ವೈಯಕ್ತಿಕವಾಗಿ ಕ್ಲೋಸ್ ಇಲ್ಲ.ಆದ್ರೆ ಅವ್ರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ,  ಆದರೆ ಪದೇ ಪದೇ ಭೇಟಿ ಆಗೋದು, ಮಾತನಾಡೋದು ಆ ರೀತಿ ಸ್ನೇಹ ಇಲ್ಲ ಎಂದರು. ಅಲ್ಲದೇ, ನಾನು ಎಲ್ಲರ ಜೊತೆ ಚೆನ್ನಾಗಿದ್ದೇನೆ. ಸಂಬಂಧಗಳಿಗೆ ನಾನು ತುಂಬಾ ಬೆಲೆ ಕೊಡುತ್ತೇನೆ. ನನಗೂ ಚಿತ್ರರಂಗದಲ್ಲಿ ಆತ್ಮೀಯ ಸ್ನೇಹಿತರಿದ್ದಾರೆ .ವೈಯಕ್ತಿಕವಾಗಿ ಅದನ್ನ ಹೇಳೋಕೆ ಆಗಲ್ಲ. ನನಗೆ ಯಾವುದೇ ಗರ್ವ ಅಹಂಕಾರ ಇಲ್ಲ ಎಂದು ಸ್ಪಷ್ಟ ಪಡಿಸಿದರು. 
ಜೆಡಿಎಸ್ ಪಕ್ಷದಲ್ಲಿ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕಾಗಿ ಹೈದ್ರಾಬಾದ್‌ನ ಆಡಿಯೋ ಟ್ರೈಲರ್ ಲಾಂಚ್‌ ಇವೆಂಟ್‌ಗೆ ಬರಲಾಗಲಿಲ್ಲ. ಕ್ಷಮೆಯಾಚಿಸುತ್ತೇನೆ. ಜೆಡಿಎಸ್ ಪಕ್ಷ ಯುವ ಘಟಕದ ಪಕ್ಷದ ಅಧ್ಯಕ್ಷ ಮಾಡಿದ್ದಾರೆ. ಗೌರವ ಸ್ಥಾನದಲ್ಲಿ ಇದ್ದ ಕಾರಣ ಕಾರ್ಯಕರ್ತರು ಹಾಗೂ ಪಕ್ಷವನ್ನು ಬಿಟ್ಟು ಬರಲಾಗಲಿಲ್ಲ. ಸಿನಿಮಾ ನನ್ನ ಪ್ಯಾಶನ್, ನನ್ನಲ್ಲಿ ಆ ಪ್ಯಾಶನ್ ಸತ್ತೋಗಿದ ದಿನ ಸಿನಿಮಾ ಬಿಡುತ್ತೇನೆ. ಅಲ್ಲಿವರೆಗೆ ನಾನು ಸಿನಿಮಾ ಮಾಡುತ್ತಿರುತ್ತೇನೆ ಎರಡಕ್ಕೂ ಸಮಾನವಾಗಿ ಸಮಯ ಮೀಸಲಿಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದ್ದಾರೆ. 
ಅಭಿಷೇಕ್ ಅಂಬರೀಷ್ ಬಗ್ಗೆ ಮಾತನಾಡಿದ ನಿಖಿಲ್, ನಾವಿಬ್ಬರು ಚೆನ್ನಾಗಿದ್ದೇವೆ. ಚುನಾವಣೆಯಾದ ಮೇಲೆ ನಾವು ಭೇಟಿಯಾಗಿಲ್ಲ. ರಾಜಕೀಯ ಹೊರತುಪಡಿಸಿ ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.