ನನ್ನ ಮುಂದಿನ ಸಿನಿಮಾಗೆ ಶರಣ್ ನಾಯಕ: ಮಹೇಶ್ ದಾನಣ್ಣನವರ್
ಗಾಳಿಪಟ-2 ಸಿನಿಮಾ ನಿರ್ಮಾಪಕ ಮಹೇಶ್ ದಾನಣ್ಣನವರ್ ತಮ್ಮ ಮುಂದಿನ ಸಿನಿಮಾ ನಾಯಕ ಶರಣ್ ಎಂದು ಘೋಷಿಸಿದ್ದಾರೆ. ...

Published On :
ಗಾಳಿಪಟ-2 ಸಿನಿಮಾ ನಿರ್ಮಾಪಕ ಮಹೇಶ್ ದಾನಣ್ಣನವರ್ ತಮ್ಮ ಮುಂದಿನ ಸಿನಿಮಾ ನಾಯಕ ಶರಣ್ ಎಂದು ಘೋಷಿಸಿದ್ದಾರೆ.
ತಮ್ಮ ಮುಂದಿನ ಚಿತ್ರಕ್ಕೆ ಶರಣ್ ನಾಯಕರಾಗಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ, ಇದೊಂದು ರೋಮ್ಯಾಂಟಿಕ್ ಕಾಮಿಡಿಯಾಗಿದ್ದು, ಶರಣ್ ಗೆ ಈ ಪಾತ್ರ ಸೂಕ್ತವಾಗಿದೆ ಎಂದು ಹೇಳಿದ್ದಾರೆ,
ಗಾಳಿಪಟ-2 ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ ಮುಂದಿನ ಚಿತ್ರಕ್ಕೆ ಕೈ ಹಾಕುವುದಾಗಿ ತಿಳಿಸಿರುವ ಮಹೇಶ್ ದಾವಣ್ಣನವರ್, ಮುಂದಿನ ಸಿನಿಮಾ ಚಿತ್ರೀಕರಣ ಬಹುತೇಕ ಉತ್ತರ ಕರ್ನಾಟಕದಲ್ಲೆ ನಡೆಯಲಿದೆ, ತಮ್ಮ ಪ್ರಾಜೆಕ್ಟ್ ಆರಂಭವಾಗುವ ಮುನ್ನ ತಮ್ಮ ಸಿನಿಮಾದ ಬಗ್ಗೆ ಎಲ್ಲಾ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ನನ್ನ ಮುಂದಿನ ಚಿತ್ರಕ್ಕೆ ಶರಣ್ ನಾಯಕ ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


