ಪೊರಕೆ ಹಿಡಿದು ಸ್ವಚ್ಛತೆಗೆ ನಿಂತ ಹೇಮಮಾಲಿನಿ, ಪತ್ನಿಯನ್ನು ಟ್ರೋಲ್ ಮಾಡಿದ ಧರ್ಮೇಂದ್ರ, ಸ್ವಚ್ಛತಾ ಅಭಿಯಾನಕ್ಕೆ ಬೆಂಬಲ
ಬಿಜೆಪಿ ಸಂಸದೆ ಹೇಮಾಮಾಲಿನಿ ಪೊರಕೆ ಹಿಡಿದು ಸಂಸತ್ ಭವನದ ಬಳಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Published On :
ಬಿಜೆಪಿ ಸಂಸದೆ ಹೇಮಾಮಾಲಿನಿ ಪೊರಕೆ ಹಿಡಿದು ಸಂಸತ್ ಭವನದ ಬಳಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.
ಹೇಮಮಾಲಿನಿ ಪೊರಕೆ ಹಿಡಿದು ನಿಂತಿರುವ ಫೋಟೊವನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ಹೇಮಮಾಲಿನಿ ಪತಿ ಧರ್ಮೇಂದ್ರ ಸಹ ಪತ್ನಿಯನ್ನು ಟ್ರೋಲ್ ಮಾಡಿದ್ದಾರೆ. ಹೇಮಾಮಾಲಿನಿ ಫೋಟೋಗೆ ಕಾಮೆಂಟ್ ಮಾಡಿದ್ದವರು ಧರ್ಮೇಂದ್ರ ಅವರನ್ನು ನಿಮ್ಮ ಪತ್ನಿ ಜೀವನದಲ್ಲಿ ಎಂದಾದರೂ ಪೊರಕೆ ಹಿಡಿದ್ದು ಉಂಟಾ? ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಧರ್ಮೇಂದ್ರ ಹೌದು ಸಿನಿಮಾಗಳಲ್ಲಿ ಹಿಡಿದಿದ್ದಾರೆ. ಆದರೆ ನನಗೂ ಇಲ್ಲಿ ಇದೇ ಮೊದಲ ಬಾರಿಗೆ ಪೊರಕೆ ಹಿಡಿದಿರುವ ರೀತಿ ಕಾಣುತ್ತಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ತಾವು ಬಾಲ್ಯದಲ್ಲಿ ಮನೆ ಕೆಲಸ ಮಾಡಲು ತಾಯಿಗೆ ನೆರವು ನೀಡುತ್ತಿದ್ದೆ. ನಾನು ಕಸಗುಡಿಸುವುದರಲ್ಲಿ ಸಮರ್ಥನಾಗಿದ್ದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


