ಹೀರೋ ಆದ ಡೈರಕ್ಟರ್: ಕಾಣದಂತೆ ಮಾಯವಾದನು ಚಿತ್ರದಲ್ಲಿ ರವಿಕಿರಣ್ ವಿಕಾಸ್ ಅಭಿನಯ
ದುನಿಯಾ ವಿಜಯ್ ಅಭಿನಯದ "ಜಯಮ್ಮನ ಮಗ" ಚಿತ್ರದ ನಿರ್ದೇಶಕ ರವಿ ಕಿರಣ್ ವಿಕಾಸ್, ಈಗ ಹೀರೋ ಆಗಿ ತೆರೆ ಮೇಲೆ ಬರಲು ಸಿದ್ದವಾಗಿದ್ದಾರೆ.

Published On :
ದುನಿಯಾ ವಿಜಯ್ ಅಭಿನಯದ "ಜಯಮ್ಮನ ಮಗ" ಚಿತ್ರದ ನಿರ್ದೇಶಕ ರವಿ ಕಿರಣ್ ವಿಕಾಸ್, ಈಗ ಹೀರೋ ಆಗಿ ತೆರೆ ಮೇಲೆ ಬರಲು ಸಿದ್ದವಾಗಿದ್ದಾರೆ. "ಕಾಣದಂತೆ ಮಾಯವಾದನು" ಚಿತ್ರದ ಮೂಲಕ ನಿರ್ದೇಶಕ ರವಿ ಕಿರಣ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
"ನಾನು ನಂದಿ, ಜಾಕಿ ಮತ್ತು ಕಡ್ಡಿಪುಡಿಯಂತಹ ಚಿತ್ರಗಳಲ್ಲಿ ಪಾತ್ರಗಳನ್ನು ಮಾಡಿದ್ದೇನೆ, ಆದರೆ ನಾಯಕ ನಟನಾಗಿ ಇದು ನನ್ನ ಮೊದಲ ಚಿತ್ರವಾಗಿದೆ." ಎಂದು ವಿಕಾಸ್ ಹೇಳುತ್ತಾರೆ, ಈ ಚಿತ್ರದಲ್ಲಿ ಸಿಂಧು ಲೋಕನಾಥ್ ರವಿ ಕಿರಣ್ ಗೆ ಜೋಡಿಯಾಗಲಿದ್ದಾರೆ.
ಇದೊಂದು ರೊಮ್ಯಾಂಟಿಕ್ ಡ್ರಾಮಾ ಎಂದಿರುವ ರವಿ ಕಿರಣ್ ಇದೊಂದು ಭೂತದ ಕಥೆಯೂ ಹೌದು ಎಉತ್ತಾರೆ. ಕಳೆದ ವಾರವಷ್ಟೇ ಕಾರ್ಯಕ್ರಮವೊಂದರಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ತಯಾರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


