ಸಿನಿಮಾ ಸುದ್ದಿ

'777 ಚಾರ್ಲಿ'ನಲ್ಲಿ ರಾಜ್ ಬಿ. ಶೆಟ್ಟಿ: ರಕ್ಷಿತ್ ಶೆಟ್ಟಿ ಜತೆ ತೆರೆ ಹಂಚಿಕೊಳ್ಳಲಿರೋ 'ಮೊಟ್ಟೆಯ ಕಥೆ' ಹೀರೋ

ರಕ್ಷಿತ್ ಶೆಟ್ತಿಯವರ ಮುಂದಿನ ಚಿತ್ರ "777 ಚಾರ್ಲಿ"ನಲ್ಲಿ ಲ್ಯಾಬ್ರಡಾರ್ಸ್ತಳಿಯ ನಾಯಿಯೂ ಸಹ ಅಭಿನಯಿಸುತ್ತಿದ್ದು ಪ್ರೇಕ್ಷಕರಲ್ಲಿ ರಕ್ಷಿತ್ ಶೆಟ್ಟಿ ಪಾತ್ರದ ಬಗೆಗೆ ಸಾಕಷ್ಟು ಕುತೂಹಲ ಮೂಡಿಸಿದೆ.

'777 ಚಾರ್ಲಿ'ನಲ್ಲಿ ರಾಜ್ ಬಿ. ಶೆಟ್ಟಿ: ರಕ್ಷಿತ್ ಶೆಟ್ಟಿ ಜತೆ ತೆರೆ ಹಂಚಿಕೊಳ್ಳಲಿರೋ 'ಮೊಟ್ಟೆಯ ಕಥೆ' ಹೀರೋ
'777 ಚಾರ್ಲಿ'ನಲ್ಲಿ ರಾಜ್ ಬಿ. ಶೆಟ್ಟಿ
Published On :
ರಕ್ಷಿತ್ ಶೆಟ್ತಿಯವರ ಮುಂದಿನ ಚಿತ್ರ "777 ಚಾರ್ಲಿ"ನಲ್ಲಿ ಲ್ಯಾಬ್ರಡಾರ್ಸ್ತಳಿಯ ನಾಯಿಯೂ ಸಹ ಅಭಿನಯಿಸುತ್ತಿದ್ದು ಪ್ರೇಕ್ಷಕರಲ್ಲಿ ರಕ್ಷಿತ್ ಶೆಟ್ಟಿ ಪಾತ್ರದ ಬಗೆಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಾಗಲೇ ಚಿತ್ರತಂಡ ಶೇ.50ರಷ್ಟು ಚಿತ್ರೀಕರಣ ಪೂರೈಸಿದ್ದು ಬರುವ ದಿನಗಳಲ್ಲಿ ರಾಜ್ ಅವರ ಪಾತ್ರದ ಕುರಿತು ಹೆಚ್ಚಿನ ವಿವರ ಬಹಿರಂಗಪಡಿಸುವುದಾಗಿ ಹೇಳಿದೆ. ರಕ್ಷಿತ್ ಬದುಕಲ್ಲಿ ಚಾರ್ಲಿಯನ್ನು ಕರೆತರುವ ಪ್ರಯತ್ನ ಈ ಚಿತ್ರದಲ್ಲಿದ್ದು ಈ ಚಿತ್ರದಲ್ಲಿ ರಾಜ್ ಪಶುವೈದ್ಯರಾಗಿ  ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಕೆ ಕಿರಣರಾಜ್ ಹೇಳುತ್ತಾರೆ, ಚಿತ್ರದ ಇತ್ತೀಚಿನ ಸ್ಟಿಲ್‌ಗಳನ್ನು ಅವರು ಪತ್ರಿಕೆಯೊಡನೆ ಹಂಚಿಕೊಂಡಿದ್ದಾರೆ.
"ರಾಜ್ ಮತ್ತು ರಕ್ಷಿತ್ ಅವರನ್ನು ಒಟ್ಟಾಗಿ ನೋಡುವುದು ಪ್ರೇಕ್ಷಕರಿಗೆ ಒಂದು ಹಬ್ಬವಾಗುತ್ತದೆ" ನಿರ್ದೇಶಕರು ಹೇಳುತ್ತಾರೆ.
777 ಚಾರ್ಲಿಯ ತಂಡವು ದ್ವಿತೀಯಾರ್ಧದ ಚಿತ್ರೀಕರಣಕ್ಕಾಗಿ ಉತ್ತರ ಭಾರತಕ್ಕೆ ಪ್ರಯಾಣಿಸಲಿದ್ದು, ಇದಕ್ಕಾಗಿ ರಕ್ಷಿತ್ ತೊಡಗಿಸಿಕೊಂಡಿರುವ "ಅವನೇ ಶ್ರೀಮನ್ನಾರಾಯಣ" ಚಿತ್ರದ ಬಿಡುಗಡೆ ದಿನವನ್ನು ನೋಡಿ ಬಳಿಕ ನಿರ್ಧರಿಸಲಾಗುತ್ತದೆ.777 ಚಾರ್ಲಿಯಲ್ಲಿ ಸಂಗೀತಾ ಪ್ರಧಾನ ನಾಯಕಿಯಾಗಿ ಕಾಣಿಸಿಕೊಳ್ಳುತಿದ್ದು  ಕಿರಿಯ ಕಲಾವಿದರಾದ ಶವರಿ ಹಾಗೂ ಪ್ರಣಯ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಪುಷ್ಕರ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಪರಂವಹ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ನೋಬಿನ್ ಪಾಲ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.