ಸಿನಿಮಾ ಸುದ್ದಿ

ಕನ್ನಡ ಚಿತ್ರದಲ್ಲಿ ಪತ್ರಲೇಖಾ, ಗೋಲ್ಡನ್ ಸ್ಟಾರ್ ಗೆ ಬಾಲಿವುಡ್ ಬೆಡಗಿ ನಾಯಕಿ

ಬಾಲಿವುಡ್ ನಟಿ, ಶಿಲ್ಲಾಂಗ್ ಸುಂದರಿ ಪತ್ರಲೇಖಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ವೇರ್ ಈಸ್ ಮೈ ಕನ್ನಡಕ? ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರದಲ್ಲಿ ಪತ್ರಲೇಖಾ, ಗೋಲ್ಡನ್ ಸ್ಟಾರ್ ಗೆ ಬಾಲಿವುಡ್ ಬೆಡಗಿ ನಾಯಕಿ
ಪತ್ರಲೇಖಾ
Published On :
ಮುಂಬೈ: ಬಾಲಿವುಡ್ ನಟಿ, ಶಿಲ್ಲಾಂಗ್ ಸುಂದರಿ ಪತ್ರಲೇಖಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ವೇರ್ ಈಸ್ ಮೈ ಕನ್ನಡಕ? ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರಾಜ್ ಮತ್ತು ದಾಮಿನಿ ದಂಪತಿಯ ನಿಜ ಜೀವನದ ಕುರಿತ ಈ ಕನ್ನಡ ಚಿತ್ರದಲ್ಲಿ ಪತ್ರಲೇಖಾ ಅಭಿನಯಿಸುತ್ತಿದ್ದಾರೆ.
ನಾನು ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಆ ಸಿನಿಮಾದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೇನೆ. ನನ್ನ ಪಾತ್ರದ ಬಗ್ಗೆ ಹೆಚ್ಚಿಗೆ ಹೇಳಲ್ಲ. ಆದರೆ ಈ ಪಾತ್ರ ಈ ಹಿಂದೆ ಮಾಡಿದ್ದ ಎಲ್ಲಾ ಪಾತ್ರಗಳಿಗಿಂತ ಭಿನ್ನವಾಗಿರಲಿದೆ ಎಂದು ಪತ್ರಲೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಲಿದ್ದು, ಲಂಡನ್ ನಲ್ಲಿ ಚಿತ್ರೀಕರಣ ನಡೆಯಲಿದೆ.
ಪತ್ರಲೇಖಾ ಬಾಲಿವುಡ್ ನಲ್ಲಿ ಕೇವಲ ಮೂರೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೂ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪತ್ರವಾಗಿದ್ದು, ಈಗ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ.
ಸಿಟಿಲೈಟ್ಸ್ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಪತ್ರಲೇಖಾ, ಮೊದಲ ಚಿತ್ರದಲ್ಲೇ ಅತ್ಯುತ್ತಮ ಉದಯೋನ್ಮುಖ ನಟಿ ಎಂಬ ಪ್ರಶಸ್ತಿ ಪಡೆದಿದ್ದರು.
2016ರಲ್ಲಿ ಬಿಡುಗಡೆಯಾದ ಲವ್ ಗೇಮ್ಸ್ ಈಕೆಯ ಎರಡನೇ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಗೋತಾ ಹೊಡೆದರೂ, ಪತ್ರಲೇಖಾಳ ಅಭಿನಯ ವಿಮರ್ಶಕರ ಮೆಚ್ಚುಗೆ ಪಡೆಯಿತು. 
ಮೂರನೇ ಚಿತ್ರ ನಾನು ಕೀ ಜಾನು ಎಂಬ ಹಾರರ್ ಕಾಮಿಡಿ ಸಿನಿಮಾದಲ್ಲಿ ಪತ್ರಲೇಖಾ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.