ಸಿನಿಮಾ ಸುದ್ದಿ

2.0 ಚಿತ್ರ ನಿರ್ಮಿಸಿದ ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಕುಮಾರ್ ಮುಂದಿನ ಸಿನಿಮಾ

ಸೀತಾರಾಮ ಕಲ್ಯಾಣ ಸಿನಿಮಾ ನಂತರ ನಟ ನಿಖಿಲ್ ಕುಮಾರ್ ರಜನಿಕಾಂತ್ ನಟನೆಯ 2.0 ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ....

2.0 ಚಿತ್ರ ನಿರ್ಮಿಸಿದ ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಕುಮಾರ್ ಮುಂದಿನ ಸಿನಿಮಾ
ನಿಖಿಲ್ ಕುಮಾರ್ ಮತ್ತು ಸುಬಾಷ್ ಕರಣ್
Published On :
ಸೀತಾರಾಮ ಕಲ್ಯಾಣ ಸಿನಿಮಾ ನಂತರ ನಟ ನಿಖಿಲ್ ಕುಮಾರ್  ರಜನಿಕಾಂತ್ ನಟನೆಯ 2.0 ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.
ಭಾನುವಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರು ಮೊಮ್ಮಗ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ವೀಕ್ಷಿಸಿದರು.
ಇನ್ನೂ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರ ತಂಡ ಇಂದು ವಿಶೇಷ ಕಾರ್ಯಕ್ರಮ ಆಯೋಜಿಸಿದೆ, ಇನ್ನೂ ರಾಜ್ಯಾದ್ಯಂತ ಪ್ರವಾಸ ಮಾಡಿ ಸಿನಿಮಾ ಯಶಸ್ಸನ್ನು ಆಚರಿಸುವುದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಜನವರಿ 19 ರಂದು ಸೀತಾರಾಮ ಕಲ್ಯಾಣ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ, ಸುಬಾಷ್ ಕರಣ್ ತಮ್ಮ ಪ್ರೊಡಕ್ಷನ್ ನಲ್ಲಿ ನಿಖಿಲ್ ಕುಮಾರ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಘೋಷಿಸಿದ್ದರು, ಈ ವಿಷಯ ಎಲ್ಲಾ ಚಾನೆಲ್ ಗಳಲ್ಲೂ ಪ್ರಸಾರವಾಗಿತ್ತು, 
ಈ ಹಿಂದೆ ನಟ ನಿಖಿಲ್ ಕುಮಾರ್ ಹೈದರಾಬಾದ್ ನಲ್ಲಿ ಲೈಕಾ ಸಂಸ್ಠೆಯ ನಿರ್ಮಾಪಕರನ್ನು ಭೇಟಿಯಾಗಿದ್ದರು,  ಹಲವು ಸುತ್ತಿನ ಮಾತುಕತೆಗಳ ನಂತರ, ಇಬ್ಬರು ಒಟ್ಟಿಗೆ ಸಿನಿಮಾ ಮಾಡಲು ಸಮ್ಮತಿಸಿದ್ದಾರೆ. ಸಿನಿಮಾಗಾಗಿ ಕಥೆ ಸಿದ್ಧವಾಗುತ್ತಿದೆ. ಸಿನಿಮಾ ನಾಲ್ಕು ದಕ್ಷಿಣ ಭಾರತ ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಲೈಕಾ ಕಂಪನಿ ಜೊತೆ ಮುಂದಿನ ಸಿನಿಮಾ ಮಾಡುತ್ತಿರುವ ಬಗ್ಗೆ ನಿಖಿಲ್ ಸ್ಪಷ್ಟ ಪಡಿಸಿದ್ದಾರೆ. ಎಲ್ಲವೂ ಆರಂಭಿಕ ಹಂತದಲ್ಲಿದೆ, ಕಥೆ ಸಿದ್ಧವಾದ ನಂತರ ಸಿನಿಮಾ ಸಂಬಂಧ ಎಲ್ಲಾ ಮಾಹಿತಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ,ಇದರ ಜೊತೆಗೆ ಸಿ.ಆರ್ ಮನೋಹರ್ ನಿರ್ಮಾಣದ ಸಿನಿಮಾದಲ್ಲೂ ನಿಖಿಲ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.