ಸಿನಿಮಾ ಸುದ್ದಿ

ಮನೆಕೆಲಸದ ಬಾಲಕಿಗೆ ಕಿರುಕುಳ: ನಟಿ ಭಾನುಪ್ರಿಯಾ ವಿರುದ್ಧ ದೂರು ದಾಖಲು

ನಟಿ ಭಾನುಪ್ರಿಯಾ ತಮ್ಮ 14 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ...

ಮನೆಕೆಲಸದ ಬಾಲಕಿಗೆ ಕಿರುಕುಳ: ನಟಿ ಭಾನುಪ್ರಿಯಾ ವಿರುದ್ಧ ದೂರು ದಾಖಲು
ನಟಿ ಭಾನುಪ್ರಿಯಾ
Published On :
ಆಂಧ್ರಪ್ರದೇಶ: ನಟಿ ಭಾನುಪ್ರಿಯಾ ತಮ್ಮ 14 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. 
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರು ಸಮಲ್‍ಕೋಟ್ ಪೊಲೀಸ್ ಠಾಣೆಯಲ್ಲಿ ಭಾನು ಪ್ರಿಯಾ ವಿರುದ್ಧ ದೂರು ದಾಖಲಾಗಿದೆ.
ಮನೆಕೆಲಸಕ್ಕಾಗಿ ತನ್ನ 14 ವರ್ಷದ ಮಗಳನ್ನು ಚೆನ್ನೈಗೆ ಕರೆದೊಯ್ದು ಕಿರುಕುಳ ನೀಡಿದ್ದಾಗಿ ದೂರು ನೀಡಿರುವ ಮಹಿಳೆ ಆರೋಪಿಸಿದ್ದಾರೆ.  ಚೆನ್ನೈನಲ್ಲಿರುವ ಭಾನುಪ್ರಿಯಾ ನಿವಾಸದಲ್ಲಿ 14 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಾರೆ. ಭಾನುಪ್ರಿಯಾ ಸಹೋದರ ಗೋಪಾಲ ಕೃಷ್ಣ ಎಂಬುವವರು ಆ ಬಾಲಕಿಗೆ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. 
ಅನಾಮಧೇಯ ಕರೆಯ ಮೂಲಕ ತಮಗೆ ಈ ಸಂಗತಿ ಗೊತ್ತಾಗಿದ್ದಾಗಿ ಬಾಲಕಿಯ ತಾಯಿ ಪ್ರಭಾವತಿ ತಿಳಿಸಿದ್ದಾರೆ. 
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಭಾನುಪ್ರಿಯಾ ಬಾಲಕಿಯು ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ, ಆದರೆ ಇನ್ನೂ ಬಾಲಕಿ ಅವರ ಮನಯಲ್ಲಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.