ಅವಕಾಶ ಸಿಕ್ಕರೆ ದರ್ಶನ್ ಜೊತೆ ಸಿನಿಮಾ ಮಾಡಲು ಸಿದ್ದ; ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಮಧ್ಯೆ ಇದ್ದ ಸ್ನೇಹ ಎರಡು ವರ್ಷಗಳ ...

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಮಧ್ಯೆ ಇದ್ದ ಸ್ನೇಹ ಎರಡು ವರ್ಷಗಳ ಹಿಂದೆ ಮುರಿದು ಬಿದ್ದಾಗ ಅವರ ಅಪಾರ ಅಭಿಮಾನಿಗಳಿಗೆ ನೋವಾಗಿತ್ತು. ತೂಗುದೀಪ ದರ್ಶನ್ ಅವರೇ ಟ್ವಿಟ್ಟರ್ ನಲ್ಲಿ, ಇನ್ನು ನಾವಿಬ್ಬರೂ ಗೆಳೆಯರಲ್ಲ, ಕೇವಲ ಕಲಾವಿದರಷ್ಟೇ ಎಂದು ಘೋಷಿಸಿಕೊಂಡಿದ್ದರು.
ಹಿರಿಯ ಕಲಾವಿದರಾದ ವಿಷ್ಣುವರ್ಧನ್, ಅಂಬರೀಷ್ ಅವರಂತೆ ಕುಚಿಕು ಗೆಳೆಯರು ಎಂದು ಕರೆಸಿಕೊಳ್ಳುತ್ತಿದ್ದ ಇವರಿಬ್ಬರೂ ದೂರವಾದ ನಂತರ ಅನೇಕ ಊಹಾಪೋಹಗಳು ಕೇಳಿಬಂದವು.
ಈ ಬಗ್ಗೆ ಇದೀಗ ಸುದೀಪ್ ಮಾಧ್ಯಮವೊಂದರ ಸಂದರ್ಶನ ವೇಳೆ ಮಾತನಾಡಿದ್ದಾರೆ. ಉತ್ತಮ ಗೆಳೆಯರಾಗಿದ್ದ ನಾವು ದೂರವಾದಾಗ ಎಲ್ಲರಿಗೂ ನೋವಾಗಿದ್ದು ನಿಜ. ನನ್ನ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಂಡು ದರ್ಶನ್ ಜೊತೆ ಮೊದಲಿನಂತೆ ಸ್ನೇಹ ಮಾಡಲು ನಾನು ಸಿದ್ದ. ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಟ್ವಿಟ್ಟರ್ ನಲ್ಲಿ ಅವರನ್ನು ಅನ್ ಫಾಲೋ ಮಾಡಿಲ್ಲ. ದರ್ಶನ್ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಮುಂದಿನ ಯಜಮಾನ ನನ್ನ ಪೈಲ್ವಾನ್ ಚಿತ್ರಕ್ಕಿಂತಲೂ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಭವಿಷ್ಯದಲ್ಲಿ ದರ್ಶನ್ ಜೊತೆ ಒಂದಾಗುವ ಅವಕಾಶ ಸಿಕ್ಕರೆ ಖಂಡಿತಾ ಒಂದಾಗಿ ಅವರ ಜೊತೆ ಸಿನಿಮಾ ಮಾಡಲು ಸಿದ್ದನಿದ್ದೇನೆ, ಆದರೆ ಗೌರವ ಸಿಗದ ಕಡೆ ನಾನು ಹೋಗುವುದಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


