ನಟ ಮತ್ತು ನಿರ್ದೇಶನ ಎರಡೂ ಖುಷಿ ಕೊಡುತ್ತಿದೆ: ಎಂಜಿ ಶ್ರೀನಿವಾಸ್
ನಟನಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದವರು ಎಂ ಜಿ ಶ್ರೀನಿವಾಸ್. ಡ್ಯಾನ್ಸ್ ಕೊರಿಯೊಗ್ರಫರ್ ಆಗಿ ವೃತ್ತಿ...

ನಟನಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದವರು ಎಂ ಜಿ ಶ್ರೀನಿವಾಸ್. ಡ್ಯಾನ್ಸ್ ಕೊರಿಯೊಗ್ರಫರ್ ಆಗಿ ವೃತ್ತಿ ಆರಂಭಿಸಿದ ಶ್ರೀನಿವಾಸ್ ನಂತರ ಆರ್ ಜೆಯಾದರು. ಕ್ಯಾಮರಾ ಮುಂದೆ ನಿಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದಾಗ ನಟ ಉಪೇಂದ್ರ ಅವರ ಟೋಪಿವಾಲಾದಲ್ಲಿ ಅವಕಾಶ ಸಿಕ್ಕಿತು. ಉಪೇಂದ್ರ ಅವರ ಉತ್ತೇಜನದಿಂದ ನಿರ್ದೇಶನಕ್ಕೆ ಬಂದೆ ಎನ್ನುತ್ತಾರೆ ಶ್ರೀನಿವಾಸ್.
5 ವರ್ಷಗಳ ನಂತರ ಶ್ರೀನಿವಾಸ ಕಲ್ಯಾಣ ಚಿತ್ರ ನಿರ್ದೇಶಿಸಿದರು,ನಂತರ ಇದೀಗ ಬೀರಬಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶ್ರೀನಿವಾಸ ಕಲ್ಯಾಣ ನಂತರ ಎರಡು-ಮೂರು ರೊಮ್ಯಾಂಟಿಕ್ ಚಿತ್ರಗಳ ನಿರ್ದೇಶನಕ್ಕೆ ಅವಕಾಶ ಬಂದವು, ಆದರೆ ನನಗೆ ಇಷ್ಟವಾಗಲ್ಲ. ಪ್ರಯೋಗಾತ್ಮಕ ಚಿತ್ರವನ್ನು ಮಾಡಲು ಇಷ್ಟಪಟ್ಟು ಕ್ರೈಮ್ ಥ್ರಿಲ್ಲರ್ ವಿಷಯ ಒಪ್ಪಿಕೊಂಡೆ ಎಂದರು.
ರಂಗಭೂಮಿ, ನೃತ್ಯದ ಹಿನ್ನಲೆ ಹೊಂದಿರುವ ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸುತ್ತಿದ್ದು ಸಂಗೀತ ನಿರ್ದೇಶಕರಾಗಿ ಸೌರಭ್ ವೈಭವ್ ಚೊಚ್ಚಲ ಸಂಗೀತ ನಿರ್ದೇಶಕರಾಗಿ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ. ಭರತ್ ಪರಶುರಾಮ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


