ರುಸ್ತಂಗಾಗಿ ಕನ್ನಡ ಕಲಿತ ವಿವೇಕ್ ಒಬೆರಾಯ್!
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯಿಸುತ್ತಿದ್ದು ಚಿತ್ರಕ್ಕಾಗಿ ಕನ್ನಡ ಕಲಿತ ಒಬೆರಾಯ್ ಅವರು ಕನ್ನಡದಲ್ಲೇ...

Published On :
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯಿಸುತ್ತಿದ್ದು ಚಿತ್ರಕ್ಕಾಗಿ ಕನ್ನಡ ಕಲಿತ ಒಬೆರಾಯ್ ಅವರು ಕನ್ನಡದಲ್ಲೇ ಡಬ್ ಮಾಡಲಿದ್ದಾರೆ.
ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದು ಅವರ ನಿರ್ದೇಶನದ ರುಸ್ತುಂ ಚಿತ್ರದ ಚಿತ್ರೀಕರಣ ಅದಾಗಲೇ ಮುಕ್ತಾಯಗೊಂಡದ್ದು ಡಬ್ಬಿಂಗ್ ಕಾರ್ಯಗಳು ನಡೆಯುತ್ತಿವೆ.
ಇನ್ನು ವಿವೇಕ್ ಒಬೆರಾಯ್ ಪಾತ್ರಕ್ಕೆ ಧ್ವನಿ ನೀಡಲು ಡಬ್ಬಿಂಗ್ ಕಲಾವಿದರನ್ನು ಆಯ್ಕೆ ಮಾಡುವ ಚಿಂತನೆ ನಡೆಸಿದ್ದರು ನಿರ್ದೇಶಕ ರವಿವರ್ಮಾ. ಈ ವೇಳೆ ತಾವೇ ಧ್ವನಿ ನೀಡುವುದಾಗಿ ವಿವೇಕ್ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಬಾಲಿವುಡ್ ನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ರುಸ್ತುಂ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು ಜನವರಿ 20ರಿಂದ ಈ ಕೆಲಸಗಳು ಆರಂಭಗೊಳ್ಳಲಿದೆ. ಚಿತ್ರಕ್ಕೆ ಅನೂಪ್ ಸೀಲಿನ್ ಸಂಗೀತ ಸಂಯೋಜಿಸುತ್ತಿದ್ದು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SandalwoodShivarajkumarRavi Varmaರವಿವರ್ಮಾಸ್ಯಾಂಡಲ್ವುಡ್ಶಿವರಾಜಕುಮಾರ್Vivek Oberoiವಿವೇಕ್ ಒಬೆರಾಯ್ರುಸ್ತುಂRustum
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


