ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾದ ಯುವ ಆಟಗಾರ, ಫೋಟೋ ವೈರಲ್!
ರಾಕಿಂಗ್ ಸ್ಟಾರ್ ಯಶ್ ಅವರನ್ನು ಟೀಂ ಇಂಡಿಯಾದ ಸ್ಟಾರ್ ಯುವ ಆಟಗಾರರೊಬ್ಬರು ಭೇಟಿ ಮಾಡಿ ಕೆಲವೊತ್ತು ಮಾತನಾಡಿದ್ದಾರೆ.

Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಟೀಂ ಇಂಡಿಯಾದ ಸ್ಟಾರ್ ಯುವ ಆಟಗಾರರೊಬ್ಬರು ಭೇಟಿ ಮಾಡಿ ಕೆಲವೊತ್ತು ಮಾತನಾಡಿದ್ದಾರೆ.
ಟೀಂ ಇಂಡಿಯಾದ ಆಟಗಾರ ಪೃಥ್ವಿ ಶಾ ನಟ ಯಶ್ ರನ್ನು ಭೇಟಿ ಮಾಡಿದ್ದಾರೆ. ಪೃಥ್ವಿ ಶಾ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಇತ್ತ ನಟ ಯಶ್ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ದರು. ಹೀಗಾಗಿ ಇಂದು ಪೃಥ್ವಿ ಯಶ್ ಅವರನ್ನು ಭೇಟಿ ಮಾಡಿದ್ದು ಕೆಲ ಸಮಯ ಅವರ ಜೊತೆ ಮಾತನಾಡಿ ಕಾಲ ಕಳೆದಿದ್ದಾರೆ.
ಪೃಥ್ವಿ ಶಾ ಯಶ್ ರನ್ನು ಭೇಟಿ ಮಾಡಿದ್ದ ಫೋಟೋಗಳನ್ನು ಯಶ್ ಅಭಿಮಾನಿಗಳು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಶ್ ಅಭಿಮಾನಿಗಳು ಟ್ವೀಟ್ ನಲ್ಲಿ ಭಾರತದ ಕ್ರಿಕೆಟ್ ತಂಡದ ಆಟಗಾರರು & 19 ವರ್ಷದೊಳಗಿನ ವಿಶ್ವಕಪ್ ಪಂದ್ಯವನ್ನು ಭಾರತಕ್ಕೆ ಗೆದ್ದು ಕೊಟ್ಟ ನಾಯಕ "ಪೃಥ್ವಿ ಶಾ" ಅವರು ಇಂದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿ ಕೆಲಸಮಯ ಕಳೆದರು...!! ಎಂದು ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


