2019: ಸ್ಯಾಂಡಲ್ವುಡ್ ಮುನ್ನೋಟ
2019 ಸ್ಯಾಂಡಲ್ ವುಡ್ ಪಾಲಿಗೆ ಸುಗಿಯೋ ಸುಗ್ಗಿ. ಕಾರಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮತ್ತು ಯುವರತ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತಿತರ ಚಿತ್ರಗಳು ಬಿಡುಗಡೆಯಾಗಲಿವೆ.

2019 ಸ್ಯಾಂಡಲ್ ವುಡ್ ಪಾಲಿಗೆ ಸುಗಿಯೋ ಸುಗ್ಗಿ. ಕಾರಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮತ್ತು ಯುವರತ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಯಜಮಾನ, ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಮತ್ತು ಕೊಟ್ಟಿಗೊಬ್ಬ-3, ರಕ್ಷಿತ್ ಶೆಟ್ಟಿಯ ಅವನ್ನೇ ಶ್ರೀಮನ್ನಾರಾಯಣ, ಶ್ರೀಮುರುಳಿಯ ಭರಾಟೆ, ಮದಗಜ, ಗಣೇಶ್ ಅಭಿಯನದ ಗೀತಾ, ಗಿಮ್ಮಿಕ್ ಸೇರಿದಂತೆ ಸುಮಾರು 99 ಚಿತ್ರಗಳು ಬಿಡುಗಡೆಯ ಪಟ್ಟಿಯಲ್ಲಿವೆ.
ಹೊಸ ಮುಖಗಳು
ಈ ವರ್ಷ ಹೊಸಬರು ಚಿತ್ರರಂಗದಲ್ಲಿ ತಮ್ಮ ಅದೃಷ್ಟಕ್ಕೆ ಮುಂದಾಗಿದ್ದಾರೆ. ಅವರುಗಳ ಪೈಕಿ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾ ಸುಪುತ್ರ ಅಭಿಷೇಕ್ ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತಾನ್ಯ ಹೊಪ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಕೊನೆಯ ಹಂತದ ಚಿತ್ರೀಕರಣ ಸಾಗುತ್ತಿದೆ.
ಶ್ರೇಯಸ್ಸು ಮಂಜು: ನಿರ್ಮಾಪಕ ಮಂಜು ಪುತ್ರ ಶ್ರೇಯಸ್ಸು ಮಂಜು , ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಢಕ್ಷನ್ ಹಂತದಲ್ಲಿದೆ. ನಿಶ್ವಿಕಾ ನಾಯ್ಡು ಈ ಚಿತ್ರದ ನಾಯಕಿಯಾಗಿದ್ದು, ರವಿಚಂದ್ರನ್ , ಸುಧಾರಾಣಿ ಮತ್ತಿತರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಚಿತ್ ಸಂಜೀವ್ : ಇನ್ನೂ ಕಿಚ್ಚ ಸುದೀಪ್ ಸಂಬಂಧಿ ಸಂಚಿತ್ ಸಂಜಿವ್ ಕ್ಯಾಮರಾ ಮುಂದೆ ಬರಲು ಸಿದ್ಧರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿನ ಫಿಲಂ ಅಕಾಡೆಮಿಯಲ್ಲಿ ಚಿತ್ರ ನಿರ್ಮಾಣ, ಅಭಿಯನ, ಮತ್ತು ಛಾಯಾಗ್ರಹಣದ ಬಗ್ಗೆ ತರಬೇತಿ ಪಡೆದಿದ್ದು, ಕಿಚ್ಚ ಸುದೀಪ್ ಹೊಮ್ ಪ್ರೊಡಕ್ಷನ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.
ವಿರಾಟ್ : ಅಂಬಾರಿ ಮತ್ತು ಅದ್ದೂರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ವಿರಾಟ್ ಅವರನ್ನು ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಥೆ, ನಿರ್ದೇಶನವನ್ನು ಅರ್ಜುನ್ ಅವರೇ ಮಾಡುತ್ತಿದ್ದು, ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್ ನಡಿ ಚಿತ್ರ ನಿರ್ಮಾಣ ವಾಗುತ್ತಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.
ಧೀರೆನ್ ರಾಮ್ ಕುಮಾರ್ : ಕನ್ನಡದ ವರನಟ ಡಾ. ರಾಜ್ ಕುಮಾರ್ ಮೊಮ್ಮಗ ಧೀರೆನ್ ರಾಮ್ ಕುಮಾರ್ ದಾರಿ ತಪ್ಪಿದ ಮಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ತಾನ್ಯ ಹೋಪೆ : 2015 ಮಿಸ್ ಇಂಡಿಯಾ ಅಂತಿಮ ಸುತ್ತಿನಲ್ಲಿದ್ದ ತಾನ್ಯಾ ಹೋಪೆ ಸ್ಯಾಂಡಲ್ ವುಡ್ ನ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಪೇಂದ್ರ ಜೊತೆಗೆ ಹೋಮ್ ಮಿನಿಸ್ಟರ್, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ, ದರ್ಶನ್ ಅಭಿಯನದ ಯಜಮಾನ ಹಾಗೂ ಅಭಿಷೇಕ್ ಅಭಿನಯದ ಅಮರ್ ಚಿತ್ರಗಳಲ್ಲಿ ತಾನ್ಯ ಹೋಪೆ ಅಭಿನಯಿಸುತ್ತಿದ್ದಾರೆ..
ಒಟ್ಟಾರೇ, 2019ರಲ್ಲಿ ವಿವಿಧ ಚಿತ್ರಗಳ ಮೂಲಕ ಹೊಸಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವೀಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


