ಅಯೋಗ್ಯ-2 ಕಥೆ ರೆಡಿಯಾಗಿದೆ, ಮದಗಜ ನಂತರ ಶೂಟಿಂಗ್: ಮಹೇಶ್ ಕುಮಾರ್
2018ರಲ್ಲಿ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಂಡ ಅಯೋಗ್ಯ ಭಾಗ 2 ಸಿನಿಮಾಗಾಗಿ ನಿರ್ದೇಶಕರು ತಯಾರಿ ನಡೆಸಿದ್ದಾರೆ, ನಿರ್ದೇಶಕ ಮಹೇಶ್ ಕುಮಾರ್..

Published On :
2018ರಲ್ಲಿ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಂಡ ಅಯೋಗ್ಯ ಭಾಗ 2 ಸಿನಿಮಾಗಾಗಿ ನಿರ್ದೇಶಕರು ತಯಾರಿ ನಡೆಸಿದ್ದಾರೆ, ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ2 ಗಾಗಿ ಕಥೆ ಸಿದ್ದ ಪಡಿಸಿಕೊಂಡಿದ್ದಾರೆ.
ಆದರೇ ಕೂಡಲೇ ಶೂಟಿಂಗ್ ಆರಂಭಿಸಲು ಸಾಧ್ಯವಿಲ್ಲ, ಏಕೆಂದರೇ ಶ್ರೀಮುರುಳಿ ನಟನೆಯ ಮದಗಜ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ, ಹೀಗಾಗಿ ಮದಗಜ ಚಿತ್ರು ಪೂರ್ಣಗೊಂಡ ನಂತರ ಅಯೋಗ್ಯ-2 ಚಿತ್ರೀಕರಣ ಆರಂಭವಾಗಲಿದೆ.
ಆಯೋಗ್ಯ-2 ಸಿನಿಮಾಗಾಗಿ ನಿನಾಸಂ ಸತೀಶ್ ಜೊತೆ ಚರ್ಚೆಸಲಾಗಿದೆ, ನಾಯಕ ನಟಿ ರಚಿತಾ ರಾಮ್ ಸೇರಿದಂತೆ ಇಡಿ ಚಿತ್ರ ತಂಡವೇ ಅಯೋಗ್ಯ-2 ನಲ್ಲಿ ಕೆಲಸ ಮಾಡಲಿದೆ.
ಆದರೆ ಅಯೋಗ್ಯ-2 ಸಿನಿಮಾ ಬಗ್ಗೆ ಮಹೇಶ್ ಕುಮಾರ್ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ, ಸದ್ಯ ಮಹೇಶ್ ಮದಗಜ ಸಿನಿಮಾಗಾಗಿ ತಮ್ಮ ಎಲ್ಲಾ ಗಮನವನ್ನು ಅದರಲ್ಲೇ ಕೇಂದ್ರಿಕರಿಸಿದ್ದಾರೆ. ಹೀಗಾಗಿ ಬೇರೆ ಪ್ರಾಜೆಕ್ಟ್ ಬಗ್ಗೆ ಸದ್ಯ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


