ಸಿನಿಮಾ ಸುದ್ದಿ

'ಭೈರಾದೇವಿ' ಚಿತ್ರೀಕರಣದ ಸೆಟ್ ನಲ್ಲೇ ರಾಧಿಕಾ ಕುಮಾರಸ್ವಾಮಿಯಿಂದ ಕುರಿಬಲಿ?

"ಭೈರಾದೇವಿ" ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

'ಭೈರಾದೇವಿ' ಚಿತ್ರೀಕರಣದ ಸೆಟ್ ನಲ್ಲೇ ರಾಧಿಕಾ ಕುಮಾರಸ್ವಾಮಿಯಿಂದ ಕುರಿಬಲಿ?
ರಾಧಿಕಾ ಕುಮಾರಸ್ವಾಮಿ
Published On :
ಬೆಂಗಳೂರು: "ಭೈರಾದೇವಿ" ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ ಲಭ್ಯವಾಗಿದೆ.
ಆದರೆ ಈ ಸುದ್ದಿ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ನಾವೇನೂ ಕುರಿಬಲಿ ಕೊಟ್ಟಿಲ್ಲ, ಚಿತ್ರತಂಡಕ್ಕೆ ಅಡಚಣೆಯಾಗುತ್ತಿರುವುದು ನಿಜ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕುರಿಬಲಿ ನೀಡಲು ಉದ್ದೇಶಿಸಿದ್ದೇವೆ ಎಂದೂ ಹೇಳಿದೆ.
ಇತ್ತ ಸ್ಮಶಾನದಲ್ಲಿ ಬಿದ್ದು ಪೆಟ್ಟಾಗಿರುವ ರಾಧಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ "ಭೈರಾದೇವಿ" ಚಿತ್ರ ತಯಾರಾಗುತ್ತಿದ್ದು ಶ್ರೀಜೈ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.