ಶಶಾಂಕ್-ಯೋಗರಾಜ್ ಭಟ್ ನಿರ್ಮಾಣದ ಸಿನಿಮಾಕ್ಕೆ ರಿಷಿ ನಾಯಕ
ಚಿತ್ರವೊಂದಕ್ಕೆ ಇಬ್ಬರು ನಿರ್ದೇಶಕರು ಒಂದಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶಕರಾಗಿ ಅಲ್ಲ...

ಚಿತ್ರವೊಂದಕ್ಕೆ ಇಬ್ಬರು ನಿರ್ದೇಶಕರು ಒಂದಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶಕರಾಗಿ ಅಲ್ಲ, ನಿರ್ಮಾಪಕರಾಗಿ. ಯೋಗರಾಜ್ ಸಿನಿಮಾಸ್ ಮತ್ತು ಶಂಶಾಂಕ್ ಸಿನಿಮಾಸ್ ಬ್ಯಾನರ್ ನಡಿ ಚಿತ್ರವೊಂದು ತಯಾರಾಗುತ್ತಿದ್ದು ಆಪರೇಶನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕ.
ಯೋಗರಾಜ್ ಭಟ್ ತಮ್ಮ ರಾಮನ ಅವತಾರ, ಗಾಳಿಪಠ-2, ಸಾರ್ವಜನಿಕರಿಗೆ ಸುವರ್ಣಾವಕಾಶಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಈ ಇಬ್ಬರು ನಿರ್ದೇಶಕರ ಚಿತ್ರವನ್ನು ಭಟ್ಟರ ಸಹಾಯಕ ಮೋಹನ್ ಸಿಂಗ್ ನಿರ್ದೇಶಿಸಲಿದ್ದಾರೆ.
ಈ ಚಿತ್ರದ ಮೂಲಕ ಮೋಹನ್ ಸಿಂಗ್ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.
ಚಿತ್ರಕ್ಕೆ ಕಥೆ ಬರೆಯುವ ಕೆಲಸ ಅಂತಿಮ ಹಂತದಲ್ಲಿದ್ದು ಪ್ರಿ ಪ್ರೊಡಕ್ಷನ್ ಹಂತದ ಕೆಲಸ ಸದ್ಯದಲ್ಲಿಯೇ ಆರಂಭವಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿರಲಿದೆ. ಬೇರೆ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


