ಸಿನಿಮಾ ಸುದ್ದಿ

ನನ್ನ ಹುಟ್ಟು ಹಬ್ಬಕ್ಕೆ ಕೇಕ್ ಕಟ್ ಮಾಡಬೇಡಿ, ಸಿದ್ಧಗಂಗಾ ಮಠಕ್ಕೆ ಆಹಾರ ಪದಾರ್ಥ ಕಳುಹಿಸಿ: ಅಭಿಮಾನಿಗಳಿಗೆ ದರ್ಶನ್ ಕರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶನಿವಾರ ತಮ್ಮ 42ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದು, ಅಭಿಮಾನಿಗಳಿಗೂ ಕೇಕ್ ಕತ್ತರಿಸುವುದು ಬೇಡ...

ನನ್ನ ಹುಟ್ಟು ಹಬ್ಬಕ್ಕೆ ಕೇಕ್ ಕಟ್ ಮಾಡಬೇಡಿ, ಸಿದ್ಧಗಂಗಾ ಮಠಕ್ಕೆ ಆಹಾರ ಪದಾರ್ಥ ಕಳುಹಿಸಿ: ಅಭಿಮಾನಿಗಳಿಗೆ ದರ್ಶನ್ ಕರೆ
ನಟ ದರ್ಶನ್
Published On :
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶನಿವಾರ ತಮ್ಮ 42ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದು, ಅಭಿಮಾನಿಗಳಿಗೂ ಕೇಕ್ ಕತ್ತರಿಸುವುದು ಬೇಡ. ಅದರ ಬದಲು ಸಿದ್ಧಗಂಗಾ ಮಠಕ್ಕೆ ಆಹಾರ ಪದಾರ್ಥಗಳನ್ನು ಕಳುಹಿಸವಂತೆ ಕರೆ ನೀಡಿದ್ದಾರೆ. 
ದರ್ಶನ್ ಅವರು ಇತ್ತೀಚಿಗೆ ಫೇಸ್ ಬುಕ್ ನಲ್ಲಿ​ 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ, ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷ ತಂದಿದೆ ಎಂದು ಬರೆದಿದ್ದರು. ಅಲ್ಲದೆ ಅಭಿಮಾನಿಗಳು ನೀಡಿದ ವಸ್ತುಗಳನ್ನು ತಾವೇ ಅನಾಥಾಶ್ರಮಗಳಿಗೆ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಡಿ ಬಾಸ್
ಮತ್ತೊಬ್ಬರಿಗೆ ಆದರ್ಶವಾಗಿದ್ದಾರೆ. 
ದರ್ಶನ್ ಅವರ ಅಭಿಮಾನಿಗಳು ಸಹ ಅನಾಥಾಶ್ರಮಗಳಿಗೆ ಅಡುಗೆ ಸಾಮಾಗ್ರಿಗಳನ್ನು ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದ್ದಾರೆ.
ದರ್ಶನ್ ಕೋರಿಕೆ ಮೇರಿಗೆ ಅವರ ಹುಟ್ಟು ಹಬ್ಬಕ್ಕೆ ನಾನಾ ಜಿಲ್ಲೆಗಳಲ್ಲಿರುವ ಅಭಿಮಾನಿಗಳು ಮೂಟೆ ಮೂಟೆ ಅಕ್ಕಿ, ಬೇಳೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ದರ್ಶನ್​ ಮನೆಯ ಉಗ್ರಾಣದಲ್ಲಿ ರಾಶಿ ರಾಶಿ ಅಕ್ಕಿ ಸಂಗ್ರಹವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.