'ಚಂಬಲ್' ಡಿಕೆ ರವಿ ಜೀವನಗಾಥೆಯಲ್ಲ: ನಿರ್ದೇಶಕ ಜಾಕೋಬ್ ವರ್ಗೀಸ್
"ಚಂಬಲ್" ಚುಇತ್ರದ ಮೂಲಕ ಹೊಸದೊಂದು ಕ್ರೇಜ್ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರ ನಿರ್ದೇಶಕ ಜಾಕೋಬ್ ವರ್ಗೀಸ್ ತಯಾರಿ ನಡೆಸಿದ್ದಾರೆ. ಅವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ.....

Published On :
ಬೆಂಗಳೂರು: "ಚಂಬಲ್" ಚುಇತ್ರದ ಮೂಲಕ ಹೊಸದೊಂದು ಕ್ರೇಜ್ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರ ನಿರ್ದೇಶಕ ಜಾಕೋಬ್ ವರ್ಗೀಸ್ ತಯಾರಿ ನಡೆಸಿದ್ದಾರೆ. ಅವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪುನರಾಗಮನವಾಗುತ್ತಿದ್ದಾರೆ.ಚಿತ್ರದಲ್ಲಿ ನೀನಾಸಂ ಸತೀಶ್ ಮುಖ್ಯ ಪಾತ್ರದಲಿದ್ದು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಟ್ರೈಲರ್ ಮತ್ತು ಟೀಸರ್ ಇದಾಗಲೇ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ.ಇನ್ನು ಈ ಚಿತ್ರ ಕರ್ತವ್ಯ ನಿಷ್ಠ ಅಧಿಕಾರಿಯಾಗಿದ್ದ ಡಿಕೆ ರವಿ ಅವರ ಜೀವನ ಆಧರಿಸಿದೆ ಎಂದು ಹೇಳಲಾಗಿದ್ದರೂ ನಿರ್ದೇಶಕರು ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ನಿರ್ದೇಶಕರು ಈ ಚಿತ್ರಕಥೆ ಹಲವು ಐಎಎಸ್ ಅಧಿಕಾರಿಗಳ ಜೀವನದಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಿದ್ದಾರೆ."ಇದು ಒಂದು ಥ್ರಿಲ್ಲರ್ ಚಿತ್ರ. ಚಿತ್ರದಲ್ಲಿದ್ದದ್ದು ಒಂದು ಕಾಲ್ಪನಿಕ ಕಥೆಯಷ್ಟೆ.. ವಾಸ್ತವವಾಗಿ, ಈ ಕಥೆಗಳು ತಮ್ಮ ಜೀವನಕ್ಕೆ ಸಮೀಪವಾಗಿದೆ.ಹೇಗಾದರೂ, ಯಾರೊಬ್ಬರನ್ನೂ ನೋಯಿಸುವ ಅಥವಾ ಅವಮಾನಿಸುವ ತಪ್ಪು ಉದ್ದೇಶವನ್ನು ನಾವೇನೂ ಹೊಂದಿಲ್ಲ.. ನಮ್ಮ ಸುತ್ತ ನಡೆಯುವ ಘಟನೆಗಳ ಮೂಲಕ ನಾವು ಸ್ಪೂರ್ತಿ ಪಡೆದುಕೊಂಡಿದ್ದೇವೆ" ಅವರು ಹೇಳುತ್ತಾರೆ.
ಈ ಮುನ್ನ ಚಿತ್ರಕ್ಕೆ "ಸುಭಾಷ್" ಎಂದು ಹೆಸರಿಡಲು ಉದ್ದೇಶಿಸಿದ್ದ ನಿರ್ದೇಶಕರಿಗೆ ಆ ಟೈಟಲ್ ಸಿಕ್ಕದೆ ಹೋದದ್ದರಿಂದ "ಚಂಬಲ್" ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರದ ಮುಖ್ಯ ಪಾತ್ರದ ಹೆಸರು ಸುಭಾಷ್ ಎಂದೇ ಉಳಿಸಿಕೊಳ್ಳಲಾಗಿದೆ."ಚಂಬಲ್ ಒಂದು ರೂಪಕ, ಇದು ಕಾಂಕ್ರೀಟ್ ಕಾಡಿನಲ್ಲಿ ನಮ್ಮ ಸುತ್ತ ನಡೆಯುತ್ತಿರುವ ಹಿಂಸೆಯನ್ನು ಪ್ರತಿಬಿಂಬಿಸಲಿದೆ" ಎಂದು ನಿರ್ದೇಶಕರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


