ಮಂಡ್ಯದ ಗಂಡು ಅಂಬಿ ಪುತ್ರನ ‘ಅಮರ್’ ಟೀಸರ್ ರಿಲೀಸ್
ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ "ಅಮರ್" ಚಿತ್ರದ ಟೀಸರ್ ಇಂದು (ಗುರುವಾರ) ಬಿಡುಗಡೆಯಾಗಿದೆ.

Published On :
ಬೆಂಗಳೂರು: ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ "ಅಮರ್" ಚಿತ್ರದ ಟೀಸರ್ ಇಂದು (ಗುರುವಾರ) ಬಿಡುಗಡೆಯಾಗಿದೆ. ಇಂದು ‘ಯೂ ಟ್ಯೂಬ್‌ನಲ್ಲಿ ಬಿಡುಗಡೆ ಕಂಡಿರುವ ಟೀಸರ್ ನಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅವರ ಪಂಚಿಂಗ್ ಡೈಲಾಗ್ ಗಳಿದೆ.
ಅಭಿಷೇಕ್ ಅವರ ಮೊದಲ ಚಿತ್ರ ಇದಾಗಿದ್ದು ಅಂಬರೀಶ್ ಪುತ್ರನ ಮೊದಲಚಿತ್ರವನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಈ ಟೀಸರ್ ಇನ್ನಷ್ಟು ಕುತೂಹಲ ಕೆರಳಿಸಿದೆ.
"ಅಮರ್" ಟೀಸರ್ ಗಾಗಿ ಇದಾಗಲೇ ಕಿಚ್ಚ ಸುದೀಪ್, ದರ್ಶನ್ ಸೇರಿ ಹಲವರು ಶುಭ ಹಾರೈಸಿದ್ದಾರೆ. ಇನ್ನು ಇದೀಗ ಮಲೇಷಿಯಾದಲ್ಲಿರುವ ಸುಮಲತಾ ತಮ್ಮ ಅಗಲಿದ ಪತಿಯನ್ನು ನೆನೆದಿದ್ದಾರೆ. ಅಲ್ಲದೆ "ಅವರು (ಅಂಬರೀಶ್) ಮೇಲಿನಿಂದಲೇ ನಿನ್ನನ್ನು ನೋಡಿ ‘ಮಗ್ನೇ, ಆಲ್ ದಿ ಬೆಸ್ಟ್..’ ಎಂದಿರುತ್ತಾರೆ” ಎಂದೂ ಹೇಳಿದ್ದಾರೆ. ಅಲ್ಲದೆ ಮಗನ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿ ಅವರು ಟ್ವೀಟ್ ಮಾಡಿದ್ದಾರೆ.
ಅಂಬಿ ತೀರಿಕೊಳ್ಳುವ ಕೆಲ ದಿನಗಳಿಗೆ ಮುನ್ನ ತಮ್ಮ ಪುತ್ರ ಅಭಿಷೇಕ್ ನ ಮೊದಲ ಚಿತ್ರ "ಅಮರ್"ಕೆಲ ದೃಶ್ಯಗಳನ್ನು ತರಿಸಿ ನೋಡಿ ಸಂತಸಪಟ್ಟಿದ್ದರು.
ಇನ್ನು ಅಭಿಷೇಕ್ ಅವರ ಅಣ್ಣನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಟಿಸಿದ್ದು ಚಿತ್ರದಲ್ಲಿ ಅವರು ಶ್ರೀಮಂತ ಉದ್ಯಮಿ ಪಾತ್ರದಲ್ಲಿ ಮಿಂಚಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


