ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜಗಪತಿ ಬಾಬು ವಿಲನ್
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭವಾಗುತ್ತಿದೆ. ಈ ಸಿನಿಮಾಗೆ ವಿಲನ್ ಆಗಿ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ,

Published On :
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಸೆಕೆಂಡ್ ಶೆಡ್ಯೂಲ್ ಸಿನಿಮಾ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭವಾಗುತ್ತಿದೆ. ಈ ಸಿನಿಮಾಗೆ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ,
ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಜಗಪತಿಬಾಬು ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಎರಡು ಶೇಡ್ ಇರುವಂಥ ಪಾತ್ರ ನಿರ್ವಹಿಸುತ್ತಿದ್ದು, ಹನ್ನೆರಡು ವರ್ಷದ ಹುಡುಗನಾಗಿಯೂ ಅವರು ನಟಿಸಲಿದ್ದಾರೆ. ಈ ಭಾಗದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದ್ದು, ಇದಕ್ಕಾಗಿ ಅವರು ಭಾರೀ ತೂಕವನ್ನೂ ಇಳಿಸಿಕೊಂಡಿದ್ದರು. ಈಗ ಹೈದ್ರಬಾದ್‌ನಲ್ಲಿ ಆರಂಭವಾಗಿರುವುದು ಎರಡನೇ ಹಂತದ ಶೂಟಿಂಗ್ ಹಾಗಾಗಿ ಧ್ರುವ ಇಳಿಸಿಕೊಂಡಿದ್ದ ತೂಕವನ್ನು ಮತ್ತೆ ಏರಿಸಿಕೊಂಡಿದ್ದಾರೆ.
ನಾನಾ ವಿಶೇಷಗಳನ್ನು ಹೊತ್ತು ಬರುತ್ತಿರುವ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ನಟಿಸುತ್ತಿದ್ದು, ಸದ್ಯದಲ್ಲೇ ಅವರು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ರವಿಶಂಕರ್ ಸಾಧು ಕೋಕಿಲಾ, ಕುರಿ ಪ್ರತಾಪ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


