ಸಿನಿಮಾ ಸುದ್ದಿ

ಕೈ ಕೊಟ್ಟ ಪ್ರಿಯಕರ: ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು!

ಪ್ರಿಯಕರ ಕೈ ಕೊಟ್ಟಿದ್ದರಿಂದ ನೊಂದ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೈ ಕೊಟ್ಟ ಪ್ರಿಯಕರ: ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು!
ಜಾನ್ಸಿ
Published On :
ಹೈದರಾಬಾದ್: ಪ್ರಿಯಕರ ಕೈ ಕೊಟ್ಟಿದ್ದರಿಂದ ನೊಂದ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 
ತೆಲುಗಿನ ಕಿರುತೆರೆ ನಟಿ ಜಾನ್ಸಿ ಶ್ರೀನಗರ ಕಾಲೋನಿಯ ಶ್ರೀ ಸಾಯಿ ಸೂರ್ಯ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಈಕೆಯ ಪ್ರಿಯಕರ ಸೂರ್ಯ ಎಂಬಾತ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 
ಪವಿತ್ರ ಬಂಧನಂ ಎಂಬ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ಜಾನ್ಸಿಗೆ ಸೂರ್ಯ ಎಂಬಾತನ ಜೊತೆ ಪ್ರೇಮಾಂಕರುವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ಜಾನ್ಸಿಯನ್ನು ಕಂಡ ನೆರೆ ಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೃಷ್ಣ ಜಿಲ್ಲೆ ಮುಂಡನಪಲ್ಲಿ ಮೂಲದ ಜಾನ್ಸಿ ಮತ್ತು ಸೂರ್ಯ ಅಲಿಯಾಸ್ ನಾಣಿ ಜೊತೆ ಮದುವೆಗೆ  ನಾಣಿ ಪೋಷಕರು ಒಪ್ಪಿಗೆ ಇರಲಿಲ್ಲ. ಇದರಿಂದಾಗಿ ಸೂರ್ಯ ಜಾನ್ಸಿಯಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.
ಹೀಗಾಗಿ ಖಿನ್ನತೆಗೊಳಗಾಗಿ ಜಾನ್ಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಜಾನ್ಸಿ ಪೋಷಕರು ಆರೋಪಿಸಿದ್ದಾರೆ. ಜಾನ್ಸಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸೂರ್ಯ ನಾಪತ್ತೆಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.