ಅಜಿತ್ ಅಭಿನಯದ ವಿಶ್ವಸಂ, 'ಜಗಮಲ್ಲ'ನಾಗಿ ಕನ್ನಡಕ್ಕೆ ಡಬ್
ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ಹಲವು ಚಿತ್ರಗಳು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಕನ್ನಡ ವೀಕ್ಷಕರಿಗೂ ಅಚ್ಚುಮೆಚ್ಚಿನ ನಟರಾಗಿದ್ದಾರೆ.

ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ಹಲವು ಚಿತ್ರಗಳು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಕನ್ನಡ ವೀಕ್ಷಕರಿಗೂ ಅಚ್ಚುಮೆಚ್ಚಿನ ನಟರಾಗಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿಯನದ ಪೆಟ್ಟಾ ಚಿತ್ರದೊಂದಿಗೆ ಇತ್ತೀಚಿಗೆ ತೆರೆಕಂಡ ಅಜಿತ್ ಅಭಿಯನದ ವಿಶ್ವಸಂ ಇನ್ನೂ ಕರ್ನಾಟಕದ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿರುವಂತೆ ಆ ಚಿತ್ರವನ್ನು ಜಗಮಲ್ಲನಾಗಿ ಕನ್ನಡಕ್ಕೆ ಡಬ್ ಆಡಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಅರಿವು ಕ್ರಿಯೇಷನ್ ನಲ್ಲಿ ಡಬ್ಬಿಂಗ್ ನಡೆಯುತ್ತಿದೆ.
ನಿರ್ದೇಶಕ ಹೃದಯ ಶಿವ ಕನ್ನಡ ಆವೃತ್ತಿಯ ಚಿತ್ರದಲ್ಲಿ ಸಂಭಾಷಣೆ ಹಾಗೂ ಗೀತೆ ರಚನೆ ಮಾಡಿದ್ದಾರೆ. ವಿಶ್ವಸಂ ಚಿತ್ರದ ಕನ್ನಡ ಆವೃತ್ತಿಯನ್ನು ಹಾರಿಜನ್ ಪ್ರೋಡಕ್ಷನ್ ವಿತರಣೆ ಮಾಡಲಿದೆ.
ಅಜಿತ್ ಅವರ ತಮಿಳು ಚಿತ್ರಗಳಾದ ಯೆನ್ನಿ ಅರಿಂದಲ್ - ಸತ್ಯದೇವ್ ಐಪಿಎಸ್, ಅರಂಬಮ್- ಧೀರಾ, ಹಾಗೂ ವಿವೇಗಂ ಕಮಾಂಡೋ ಚಿತ್ರವಾಗಿ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


