ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ-ನಿರ್ಮಾಪಕ ದ್ವಾರಕೀಶ್!
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ-ನಟ ದ್ವಾರಕೀಶ್ ಅವರು ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

Published On :
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ-ನಟ ದ್ವಾರಕೀಶ್ ಅವರು ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.
ನಿನ್ನೆ ನಡೆದ ಪಡ್ಡೆಹುಲಿ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ್ವಾರಕೀಶ್ ಅವರು ದಿವಂಗತ ಡಾ. ವಿಷ್ಣುವರ್ಧನ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ವಿಷ್ಣುವರ್ಧನ್ ಜೊತೆ ನಾನು ಸುಮಾರು 19 ಚಿತ್ರಗಳನ್ನು ಮಾಡಿದ್ದೇನೆ. ಅವನನ್ನು ಮರೆಯಲು ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಬಗ್ಗೆ ಮಾತನಾಡುವುದು ಎಂದರೆ ನನಗೆ ಬಹಳ ದುಃಖವಾಗುತ್ತದೆ. ನಾನು ವಿಷ್ಣು ಇಲ್ಲ ಅಂತ ತಿಳಿದುಕೊಂಡಿಲ್ಲ. ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ ಎಂದರು.
ಇನ್ನು ಪಡ್ಡೆಹುಲಿ ಚಿತ್ರದಲ್ಲಿ ವಿಷ್ಣುವರ್ಧನ್ ಬಗ್ಗೆ ಕೊಂಡಾಡಿ, ಅವರ ಬಗ್ಗೆ ಹೇಳಿ, ಸೊಗಸಾಗಿ ಹಾಡನ್ನು ಪಡ್ಡೆಹುಲಿ ಚಿತ್ರತಂಡ ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


