ಬ್ರೇಕ್ ಅಪ್ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ: ಕಿರಿಕ್ ಬೆಡಗಿ ರಶ್ಮಿಕಾ ಬಗ್ಗೆ ಹೇಳಿದ್ದೇನು ಗೊತ್ತೆ?
ತಮ್ಮ ಮಾಜಿ ಪ್ರೇಯಸಿ ಬಗ್ಗೆ ಇಷ್ಟು ದಿನ ತುಟಿ ಬಿಗಿದುಕೊಂಡಿದ್ದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಬೆಂಗಳೂರು: ತಮ್ಮ ಮಾಜಿ ಪ್ರೇಯಸಿ ಬಗ್ಗೆ ಇಷ್ಟು ದಿನ ತುಟಿ ಬಿಗಿದುಕೊಂಡಿದ್ದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿರುವ ರಕ್ಷಿತ್, ತಮಿಳು ಭಾಷೆಯ ಚಿತ್ರವನ್ನು ಪ್ರಮೋಟ್ ಮಾಡಲು ಚೆನ್ನೈಗೆ ತೆರಳಿದ್ದಾಗ ಅಲ್ಲಿನ ಪತ್ರಿಕೆಯಂದರ ಸಂದರ್ಶನದ ವೇಳೆ ರಶ್ಮಿಕಾ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಪತ್ರಿಕೆ ಸಂದರ್ಶಕ, ರಕ್ಷಿತ್‍ಗೆ ಸಾಂತಾ ಕ್ಲಾಸ್ ಆಗಲು ಹೇಳಿದ್ದರು. ಈ ಸಂದರ್ಭದಲ್ಲಿ ಸಂದರ್ಶಕ ರಶ್ಮಿಕಾ ಅವರ ಹೆಸರು ಹೇಳಿದಾಗ, ರಕ್ಷಿತ್ ಅವರಿಗೆ ಶುಭ ಹಾರೈಸಿದರು.
ರಶ್ಮಿಕಾ ದೊಡ್ಡ ಕನಸುಗಾರ್ತಿ. ಅವರ ಹಿನ್ನೆಲೆ ನನಗೆ ಗೊತ್ತಿದೆ. ಹಾಗಾಗಿ ಆಕೆಯ ಕನಸು ಎಲ್ಲಿಂದ ಬರುತ್ತೆ ಎಂದು ಗೊತ್ತಿದೆ. ಈ ಬಾರಿ ಸಂತ ಕ್ಲಾಸ್ ಎಲ್ಲಾ ಕನಸುಗಳನ್ನು ಈಡೇರಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಬ್ರೇಕ್ ಅಪ್ ಬಳಿಕ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯಾಗಿದೆ ಎಂಬ ಪ್ರಶ್ನೆಗೆ, ಜೀವನದಲ್ಲಿ ಬಂದಿದ್ದಲ್ಲೆವನ್ನು ಹಾಗೆ ಸ್ವೀಕರಿಸಿ ಮುನ್ನಡೆದಿದ್ದೇನೆ. ಜೀವನ ಎಂಬುದು ಎಲ್ಲಕ್ಕಿಂತ ದೊಡ್ಡದು. ಇದೆಲ್ಲವು ಜೀವನದಲ್ಲಿ ಬರುವ ಸಣ್ಣ ವಿಚಾರಗಳಷ್ಟೇ. ಬದುಕಲು ಇದಕ್ಕಿಂತ ದೊಡ್ಡ ಕಾರಣಗಳಿರುತ್ತವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


