'ಮುಗಿಲ್ಪೇಟೆ'ಗೆ ಬಂದ ಮನು ರವಿಚಂದ್ರನ್
ಭರತ ನಾವುಂದ ನಿರ್ದೇಶನದ "ಮುಗಿಲ್ಪೇಟೆ" ಚಿತ್ರವನ್ನು ಅವರ ಸ್ನೇಹಿತರಾದ ಮೋತಿ ಮಹೇಶ್ ಮತ್ತು ರಕ್ಷಾ ವಿಜಯ್ ಕುಮಾರ್ ಜತೆಗೆ ಮನು ರವಿಚಂದ್ರನ್ ಸಹ ಇರುವುದು ಇನ್ನಷ್ಟು ವಿಶೇಷ ಬೆಳವಣಿಗೆಯಾಗಿದೆ.ಮೋತಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಶೂಟಿಂಗ್‌ಗಾಗಿ ಇಡೀ ತಂಡ ಡಿಸೆಂಬರ್ 26 ರವರೆಗೆ ಸಕಲೇಶಪುರದಲ್ಲಿ ಕ್ಯಾಂಪ್ ಹಾಕಿದೆ.

ಭರತ ನಾವುಂದ ನಿರ್ದೇಶನದ "ಮುಗಿಲ್ಪೇಟೆ" ಚಿತ್ರವನ್ನು ಅವರ ಸ್ನೇಹಿತರಾದ ಮೋತಿ ಮಹೇಶ್ ಮತ್ತು ರಕ್ಷಾ ವಿಜಯ್ ಕುಮಾರ್ ಜತೆಗೆ ಮನು ರವಿಚಂದ್ರನ್ ಸಹ ಇರುವುದು ಇನ್ನಷ್ಟು ವಿಶೇಷ ಬೆಳವಣಿಗೆಯಾಗಿದೆ.ಮೋತಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಶೂಟಿಂಗ್‌ಗಾಗಿ ಇಡೀ ತಂಡ ಡಿಸೆಂಬರ್ 26 ರವರೆಗೆ ಸಕಲೇಶಪುರದಲ್ಲಿ ಕ್ಯಾಂಪ್ ಹಾಕಿದೆ.
ಇನ್ನು ಚಿತ್ರದ ಮೋಷನ್ ಪೋಸ್ಟರ್ ಅನ್ನು ಮನು ಅವರ ಜನ್ಮದಿನವಾದ ಡಿಸೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ. ಅಲ್ಲದೆ ನಾಯಕ ನಟನ ಫಸ್ಟ್ ಲುಕ್ ಸಹ ರಿವೀಲ್ ಆಗಿದೆ. :ಮುಗಿಲ್ಪೇಟೆ" ಒಂದು ಕಮರ್ಷಿಯಲ್ ಎಂಟರ್ ಟೈನರ್ ಎನ್ನಲಾಗಿದ್ದು ಇದು ಮನು ರವಿಚಂದ್ರನ್ ಅವರ ಚೊಚ್ಚಲ ಚಿತ್ರವೆನ್ನುವುದು ಗಮನಾರ್ಹ.
ಚಿತ್ರದಲ್ಲಿ ಎರಡು ಶೇಡ್ ಗಳಲ್ಲಿ ಮನು ಕಾಣಿಸಿಕೊಳ್ಳುತ್ತಿದ್ದು ಪ್ರಸ್ತುತ ಫ್ಲ್ಯಾಷ್‌ಬ್ಯಾಕ್ ಭಾಗಗಳನ್ನು ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಸುಂದರವಾದ ಗಿರಿಧಾಮದ ಹಿನ್ನೆಲೆಯಲ್ಲಿ ಈ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಸೆಟ್‌ಗಳಿಂದ ಪತ್ರಿಕೆಗೆ ಕೆಲ ಸ್ಟಿಲ್ ಗಳು ಸಿಕ್ಕಿದೆ.ಕಾಯಡು ಮೊಗನ್ ಲೋಹರ್ ಚಿತ್ರದ ನಾಯಕಿಯಾಗಿದ್ದು ಈಕೆ ಮಾಡೆಲಿಂಗ್ ಕ್ಷೇತ್ರದಿಂದ ಬಂದು ನಟಿಯಾಗಿದ್ದಾರೆ. ಇದಾಗಲೇ ನಟಿ ಮರಾಠಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಆ ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ. ಇನ್ನು ನಟಿ ಕನ್ನಡದಲ್ಲಿ ತಮ್ಮ ಮೊದಲ ಚಿತ್ರದಲ್ಲೇ ಮನು ಅವರೊಡನೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಶ್ರೀಧರ್ ವಿ. ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರೆ ರವಿವರ್ಮ (ಗಂಗು) ಡಿಒಪಿ ಆಗಿದ್ದಾರೆ. ತಾರಾ, ಅವಿನಾಶ್, ಸಾಧು ಕೋಕಿಲಾ, ರಂಗಾಯಣ ರಘು ಮೊದಲಾದ ಪಾತ್ರವರ್ಗ ಚಿತ್ರದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


