ಅಂಬಿ-ಸುಮಲತಾ ವಿವಾಹ ವಾರ್ಷಿಕೋತ್ಸವ: ಅಪರೂಪದ ವೀಡಿಯೋ ಶೇರ್ ಮಾಡಿ ಪತಿಯ ಸ್ಮರಿಸಿದ ಮಂಡ್ಯ ಸಂಸದೆ
ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಅವರ ವಿವಾಹವಾಗಿ ಇಂದಿಗೆ 28 ವರ್ಷ. ಈ ಹಿನ್ನೆಲೆಯಲ್ಲಿ ನಟಿ, ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ತಮ್ಮ ದಿವಂಗತ ಪತಿಯನ್ನು ಸ್ಮರಿಸಿ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಅವರ ವಿವಾಹವಾಗಿ ಇಂದಿಗೆ 28 ವರ್ಷ. ಈ ಹಿನ್ನೆಲೆಯಲ್ಲಿ ನಟಿ, ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ತಮ್ಮ ದಿವಂಗತ ಪತಿಯನ್ನು ಸ್ಮರಿಸಿ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಪರೂಪದ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅವರು ರೆಬೆಲ್ ಸ್ಟಾರ್ ಅಂಬಿ ಜತೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
1991ರ ಡಿಸೆಂಬರ್ 8 ರಂದು ಅಂಬರೀಶ್-ಸುಮಲತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

“1991ರ ಡಿಸೆಂಬರ್ 8 ರಂದು ವಿವಾಹವಾಗಿದ್ದು, ಇಂದಿಗೆ 28 ವರ್ಷಗಳು ತುಂಬಿವೆ. ಈ ಇಷ್ಟು ವರ್ಷಗಳಲ್ಲಿ ಹಂಚಿಕೆ, ಕಾಳಜಿ, ನಗು, ಅಳು, ಕಣ್ಮರೆಯಾಗುವ, ಶೋಧಿಸುವ, ಕತ್ತಲು, ಬೆಳಕು, ಹತಾಶೆ, ಸಂತೋಷ, ಪ್ರೀತಿ ಎಲ್ಲಾ ಜತೆಯಾಗಿ ಇದ್ದವು.ಮತ್ತು ಅದ್ಯಾವಾಗಲೂ ಅವು ಜತೆಯಾಗಿರಲಿದೆ. ಸದಾ ನಿಮ್ಮನ್ನು ಪ್ರೀತಿಸುವೆ" ಸುಮಲತಾ ಟ್ವೀಟ್ ಮಾಡಿಕೊಂಡಿದ್ದಾರೆ.
ಅಲ್ಲದೆ ತಮ್ಮ ಇನ್ನೊಂದು ಟ್ವೀಟ್ ನಲ್ಲಿ ಅಂಬಿಯೊಡನೆ ತಾವು ಅಭಿನಯಿಸಿದ್ದ "ತಾಯಿಗೊಬ್ಬ ಕರ್ಣ" ಚಿತ್ರದ ಹಾಡ್ಂದನ್ನು ಹಂಚಿಕೊಂಡಿರುವ ಸುಮಲತಾ "ಈ ನೆನಪು ಒಂದು ನಗುವನ್ನು ತರುತ್ತದೆ" ಎಂದಿದ್ದಾರೆ.ಜತೆಗೆ ಅಂಬಿ-ಸುಮಲತಾ ಇಬ್ಬರೂ ಜತೆಯಾಗಿರುವ ಅಪರೂಪದ ಫೋಟೋ, ವೀಡಿಯೋಗಳನ್ನು ಸಹ ಸುಮಲತಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
On our 28th wedding anniversary
This memory brings a smile..href="https://t.co/2ExLjdE7DX">https://t.co/2ExLjdE7DX
— Sumalatha Ambareesh
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


