ಒಡೆಯ ನಂತರ ಜೀವನದ ದೃಷ್ಟಿಕೋನ ಬದಲಾಗಿದೆ- ಸನಾ ತಿಮ್ಮಯ್ಯ
ಜೀವನದ ಹೊಸ ಅಧ್ಯಾಯಕ್ಕೆ ಮುನ್ನಡಿಯಾಗಲಿರುವ ಒಡೆಯ ಚಿತ್ರದ ಬಿಡುಗಡೆಗೆ ಮಾಡೆಲ್ ಹಾಗೂ ನಟಿ ಸನಾ ತಮ್ಮಯ್ಯ ಕುತೂಹಲದಿಂದ ಕಾಯುತ್ತಿದ್ದಾರೆ.

ಬೆಂಗಳೂರು: ಜೀವನದ ಹೊಸ ಅಧ್ಯಾಯಕ್ಕೆ ಮುನ್ನಡಿಯಾಗಲಿರುವ ಒಡೆಯ ಚಿತ್ರದ ಬಿಡುಗಡೆಗೆ ಮಾಡೆಲ್ ಹಾಗೂ ನಟಿ ಸನಾ ತಮ್ಮಯ್ಯ ಕುತೂಹಲದಿಂದ ಕಾಯುತ್ತಿದ್ದಾರೆ.
ಡಿಸೆಂಬರ್ 12 ರಂದು ಚಿತ್ರ ಬಿಡುಗಡೆಯಾಗಲಿದ್ದು, ಪ್ರಸ್ತುತ ತಾನು ಅನುಭವಿಸುತ್ತಿರುವ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನವೇ ಇಂಡಸ್ಟ್ರೀ ಹಾಗೂ ಪ್ರೇಕ್ಷಕರಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಒಡೆಯ ನಂತರ ಪ್ರೇಕ್ಷಕರು ನನ್ನನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ದರ್ಶನ್ ಜೊತೆಗೆ ಚೊಚ್ಚಲ ಚಿತ್ರದಲ್ಲಿ ನಟಿಸಿದ್ದು, ಅವರಿಂದ ಅನೇಕ ಪಾಠಗಳನ್ನು ಕಲಿತಿದ್ದೇನೆ. ಒಡೆಯ ಚಿತ್ರದಿಂದ ಸಿನಿಮಾ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದು, ನಿರ್ದೇಶಕ ಶ್ರೀಧರ್, ದರ್ಶನ್ ಹಾಗೂ ಇನ್ನಿತರ ಎಲ್ಲಾ ಕಲಾವಿದರಿಗೂ ಧನ್ಯವಾದಗಳು. ನನ್ನ ಭವಿಷ್ಯವನ್ನು ಹೇಗೆ ಮುಂದೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಸಿನಿಮಾ ಸಹಾಯವಾಗಲಿದೆ. ಒಡೆಯ ನಂತರ ಜೀವನದ ದೃಷ್ಟಿಕೋನ ಬದಲಾಗಿದೆ. ದರ್ಶನ್ ಅವರಿಗೆ ಕೆಲಸದ ಬಗ್ಗೆ ಎಲ್ಲಿಲ್ಲದ ಶ್ರದ್ದೆ ಇದೆ. ಅವರು ಸ್ಪೂರ್ತಿಯಾಗಿದ್ದಾರೆ.ಯಾವುದೇ ದೃಶ್ಯವನ್ನು ಅವರು ನಿರ್ಲಕ್ಷ್ಯಮಾಡಲ್ಲ. ಇವೆಲ್ಲವನ್ನು ತಿಳಿಯಲು ಒಡೆಯ ಸೆಟ್ ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.
ಸಂದೇಶ್ ಪ್ರೊಢಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಹಿರಿಯ ಕಲಾವಿದ ದೇವರಾಜ್, ರವಿಶಂಕರ್, ಶರತ್ ಲೊಹಿತಾಶ್ವ ಮತ್ತಿತರರ ತಾರಾಬಳಗವಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


