ಸಿನಿಮಾ ಸುದ್ದಿ

ಕಿರುತೆರೆ ನಿರೂಪಕನಾಗಿ ದರ್ಶನ್: 'ಡಿ ಬಾಸ್' ಹೇಳಿದ್ದೇನು ಗೊತ್ತೆ?

ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕಿರುತೆರೆ ನಿರೂಪಕನಾಗಿ ದರ್ಶನ್: 'ಡಿ ಬಾಸ್' ಹೇಳಿದ್ದೇನು ಗೊತ್ತೆ?
ದರ್ಶನ್
Published On :

ಸ್ಯಾಂಡಲ್ವುಡ್  ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಎರಡು ವೇದಿಕೆಯಲ್ಲಿ ನನಗೆ ಕೆಲಸ ಮಾಡಲು ಆಗದು,  ದೊಡ್ಡ ಪರದೆಯ ಮೇಲೆ ಅಂದರೆ ಸಿನಿಮಾದಲ್ಲಿ ನಾನು ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ, ಕಿರುತೆರೆಯಲ್ಲಿ ನಿರೂಪಕನಾಗುವುದನ್ನು ನಾನು ಯೋಚಿಸಲು ಸಾಧ್ಯವಿಲ್ಲ ಎಂದು ಖಚಿತ ಪಡಿಸಿದ್ದಾರೆ. 

ಈ ಮೂಲಕ ದರ್ಶನ್ ಕಿರುತೆರೆಗೆ ಬರುತ್ತಾರೆ ಎಂಬ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.  ಸದ್ಯ ದರ್ಶನ್ ಕೈ ತುಂಬಾ ಸಿನಿಮಾಗಳಿವೆ, ಡಿಸೆಂಬರ್ 12 ರಂದು ಒಡೆಯ ಸಿನಿಮಾ ರಿಲೀಸ್ ಆಗುತ್ತಿದೆ, ಪೊರ್ಕಿ, ಬುಲ್ ಬುಲ್ ನಂತರ ಎಂಡಿ ಶ್ರೀಧರ್, ದರ್ಶನ್ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.