ಸಿನಿಮಾ ಸುದ್ದಿ

ಮೊದಲ ಬ್ರೇಕ್ ಅಪ್ ವಿಡಿಯೋ ಸಾಂಗ್: ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದ ದಾವಣಗೆರೆ ಹುಡುಗರು!

ದಾವಣಗೆರೆ ಹುಡುಗರ ತಂಡವೊಂದು ಬ್ರೇಕ್ ಅಪ್ ವಿಡಿಯೋ ಸಾಂಗೊಂದು ಮಾಡಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.

ಮೊದಲ ಬ್ರೇಕ್ ಅಪ್ ವಿಡಿಯೋ ಸಾಂಗ್: ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದ ದಾವಣಗೆರೆ ಹುಡುಗರು!
ಹಾಡಿನ ಸ್ಟಿಲ್
Published On :

ದಾವಣಗೆರೆ ಹುಡುಗರ ತಂಡವೊಂದು ಬ್ರೇಕ್ ಅಪ್ ವಿಡಿಯೋ ಸಾಂಗೊಂದು ಮಾಡಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.

'ನೀನೇನೇ' ಬ್ರೇಕ್ ಅಪ್ ಆಗಿರುವ ಹುಡುಗರ ಪಾಲಿನ ಫೇವರಿಟ್ ಸಾಂಗ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಬ್ಲ್ಯಾಕ್ ಕ್ಯಾಟ್ ಸ್ಟುಡಿಯೋಸ್  ರಾಕ್ ಬ್ಯಾಂಡ್ ಮ್ಯೂಸಿಕ್ ಸಂಗೀತದೊಂದಿಗೆ ಹಾಡನ್ನು ಸಂಯೋಜಿಸಿದೆ. ಇನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ವಿಡಿಯೋ ಸಾಂಗ್ ಅದಾಗಲೇ 56 ಸಾವಿರ ವೀಕ್ಷಣೆ ಕಂಡಿದೆ. 

ಹಾಡನ್ನು ಬ್ಲ್ಯಾಕ್ ಕ್ಯಾಟ್ಸ್ ಲ್ಯಾಟಿಟ್ಯೂಡ್ ನಿರ್ಮಾಣ ಮಾಡಿದೆ. ಹಾಡಿನಲ್ಲಿ ಶೇಖಡ 75ರಿಂದ 80ರಷ್ಟು ವಿಎಫ್ಎಕ್ಸ್ ಅನ್ನು ದಾವಣಗೆರೆಯಲ್ಲಿರುವ ಬಿಸಿಎಲ್ ಸಂಸ್ಧೆ ಬಳಸಿದೆ. ಈ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ, ರವಿಚಂದ್ರನ್, ರಚಿತಾ ರಾಂ ಮತ್ತು ರ್ಯಾಪರ್ ಚಂದನ್ ಶೆಟ್ಟಿ ಭೇಷ್ ಅಂದಿದ್ದಾರೆ. 

ಹಾಡಿನ ನಿರ್ದೇಶನ ಬಾಲು ವಿಜಿಎಸ್ ಮಾಡಿದ್ದಾರೆ. ಸುಜೀತ್ ಡಿ ಶಿವಲಿಂಗ ಹಾಡಿಗೆ ಧ್ವನಿಯಾಗಿದ್ದಾರೆ. ರಜಿನಿ ಮತ್ತು ತೇಜಸ್ವಿನಿ ನಟಿಯರಾಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಕಾರ್ತಿಕ್ ಬಿಜಿ ಮತ್ತು ಬಾಲು ವಿಜಿಎಸ್ ನಟರಾಗಿ ಕಾಣಿಸಿಕೊಂಡಿದ್ದಾರೆ. 

ಸಚಿನ್ ಬಾಗ್ಲಿ ಸಂಗೀತ ಸಂಯೋಜಿಸಿದ್ದಾರೆ. ಸಂಕೀತ್ ಅವರ ಛಾಯಾಗ್ರಹಣವಿದ್ದು ಚೇತನ್ ಎಂಎಸ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.