ಸಿನಿಮಾ ಸುದ್ದಿ

ಹೈದ್ರಾಬಾದ್ : ಪ್ರಭಾಸ್ 70 ಅಡಿ ಎತ್ತರದ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ!

ದಕ್ಷಿಣ ಭಾರತದ ಸೂಪರ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ 70 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡಿದ್ದಾರೆ.

ಹೈದ್ರಾಬಾದ್ : ಪ್ರಭಾಸ್ 70 ಅಡಿ ಎತ್ತರದ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ!
ಪ್ರಭಾಸ್ ಕಟೌಟ್
Published On :

ಹೈದ್ರಾಬಾದ್: ದಕ್ಷಿಣ ಭಾರತದ ಸೂಪರ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ 70 ಅಡಿ  ಎತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡಿದ್ದಾರೆ.

ಕಪ್ಪು ಬಟ್ಟೆ ಧರಿಸಿರುವ ಪ್ರಭಾಸ್ ಹಣೆಯಲ್ಲಿ ರಕ್ತ ಹರಿದುಬರುತ್ತಿರುವಂತೆ ಕಟೌಟ್  ನಿರ್ಮಾಣ ಮಾಡಲಾಗಿದೆ. ಸುದರ್ಶನ್ ಥಿಯೇಟರ್ ಮುಂಭಾಗ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು, ಈ ಕಟೌಟ್ ಗೆ ಹಾಲೆರೆದು, ಹೂಮಳೆ ಗರೆದು ಸಂಭ್ರಮಿಸಿದರು.

ಥಿಯೇಟರ್ ಮುಂಭಾಗ ಪಟಾಕಿ ಸಿಡಿಸಿ,  ಬಗೆಬಗೆಯ ನೃತ್ಯದ ಮೂಲಕ ಸಾಹೋ ಚಿತ್ರಕ್ಕೆ ಅಭಿಮಾನಿಗಳು ಸ್ವಾಗತ ಕೋರಿದರು. ಸುಜಿತ್ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ದಾ ಕಾಪೂರ್, ಜಾಕಿ ಶ್ರಾಪ್, ವೆನ್ನಿಲಾ ಕಿಶೋರ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರ ಮೂಲಕ ಶ್ರದ್ದಾ ಕಪೂರ್ ಮೊದಲ ಬಾರಿಗೆ ಸೌಥ್ ಇಂಡಸ್ಟ್ರೀ ಪ್ರವೇಶಿಸುವಂತೆ  ನಟ ಪ್ರಭಾಸ್ ಕೂಡಾ ಮೊದಲ ಬಾರಿಗೆ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.