ಜೇಟ್ಲಿ ತಮ್ಮ ಕಾರ್ಯ ಮುಗಿಸಿ ಹೋಗಿದ್ದಾರೆ: ಜಗ್ಗೇಶ್, ಅಗಲಿದ ನಾಯಕನಿಗೆ ಸ್ಯಾಂಡಲ್ ವುಡ್ ಕಂಬನಿ
ದೇಶ ಕಂಡ ಅಪ್ರತಿಮ ರಾಜಕಾರಣಿ, ಬಿಜೆಪಿಯ ಬ್ರೇನ್ ಎಂದೇ ಹೆಸರಾಗಿದ್ದ ಮಾಜಿ ಸಚಿವ ಅರುಣ್ ಜೇಟ್ಲಿಯವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ

ಬೆಂಗಳೂರು: ದೇಶ ಕಂಡ ಅಪ್ರತಿಮ ರಾಜಕಾರಣಿ, ಬಿಜೆಪಿಯ ಬ್ರೇನ್ ಎಂದೇ ಹೆಸರಾಗಿದ್ದ ಮಾಜಿ ಸಚಿವ ಅರುಣ್ ಜೇಟ್ಲಿಯವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ
“ಅರುಣ್ ಜೇಟ್ಲಿಯವರು ಒಂದೆರಡು ಬಾರಿ ಪಕ್ಷದ ಕಚೇರಿಯಲ್ಲಿ ಹಾಗೂ ಸಾರ್ವಜನಿಕವಾಗಿ ಮಾಡಿದ ಭಾಷಣ ಕೇಳಿರುವೆ..ಅವರಿಗಿದ್ದ ರಾಜಕೀಯ ಭಾಷಣದ ಶೈಲಿಗೆ ಮಾರುಹೋಗಿದ್ದೆ..ಅದ್ಭುತ ವಾಗ್ಮಿ ರಾಜಕೀಯ ಚತುರ ಬಂದಕಾರ್ಯ ಮುಗಿಸಿ ತನ್ನ ಮನೆ ಸೇರಿದರು ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ
ನಟಿ, ಸಂಸದೆ ಸುಮಲತಾ ಅಂಬರೀಷ್, “ಅರುಣ್ ಜೇಟ್ಲಿ ವಿಧಿವಶರಾದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರು ಅನುಕರಣೀಯ ಸಂಸದರು, ಕಾನೂನು ತಜ್ಞರು ಮತ್ತು ಅದ್ಭುತ ವಾಗ್ಮಿಯಾಗಿದ್ದರು ಅವರ ಕುಟುಂಬಕ್ಕೆ ನನ್ನ ಸಂತಾಪವಿದೆ” ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, “ಅರುಣ್ ಜೇಟ್ಲಿಯವರ ನಿಧನದ ಸುದ್ದಿ ತಿಳಿದು ನಿಜಕ್ಕೂ ಆಘಾತವಾಯಿತು ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ” ಎಂದು ಟ್ವಿಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ
Deeply saddened to hear the passing away of Shri Arun Jaitley. He was an exemplary parliamentarian, legal luminary and an orator par excellence. My deepest condolences to family.
— Sumalatha Ambareesh
RIP pic.twitter.com/IPpBCVRy30
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


