ಸಿನಿಮಾ ಸುದ್ದಿ

ಒಳ್ಳೆಯ ಚಿತ್ರ ಕೊಟ್ಟರೆ ಪ್ರೇಕ್ಷಕರಿಗೆ ಮಳೆ-ಬಿಸಿಲು ಯಾವುದು ಲೆಕ್ಕವಿಲ್ಲ: ದರ್ಶನ್

ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ...

ಒಳ್ಳೆಯ ಚಿತ್ರ ಕೊಟ್ಟರೆ ಪ್ರೇಕ್ಷಕರಿಗೆ ಮಳೆ-ಬಿಸಿಲು ಯಾವುದು ಲೆಕ್ಕವಿಲ್ಲ: ದರ್ಶನ್
ದರ್ಶನ್
Published On :

ಬೆಂಗಳೂರು: ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. 

ಭಾನುವಾರ ಚಿತ್ರದ ಸೆಲೆಬ್ರೆಟಿ ಶೋ ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು. ಹಿರಿಯ ನಟಿಯರಾದ ಜಯಂತಿ, ಗಿರಿಜಾ ಲೋಕೇಶ್‌, ವಿನಯಾ ಪ್ರಸಾದ್‌, ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್‌ ಬಾಬು, ಟಿ.ಎಸ್‌. ನಾಗಾಭರಣ ಸೇರಿದಂತೆ ಅನೇಕರು ಚಿತ್ರ ವೀಕ್ಷಿಸಿದರು

ಈ ಹಿಂದೆ ಬಂದ ಮಹಾಭಾರತ ಸಂಬಂಧಿತ ಪೌರಾಣಿಕ ಸಿನಿಮಾಗಳ ಭಾಗವಾಗಿದ್ದ ಕೆಲವು ಕಲಾವಿದರು ಸಿನಿಮಾ ವೀಕ್ಷಿಸಿರುವುದು ನನ್ನ ಅದೃಷ್ಟ, ನನ್ನ ಪಾಲಿಗೆ ಅವರೇ ಉತ್ತಮ ವಿಮರ್ಶಕರು ಎಂದು ನಟ ದರ್ಶನ್ ಹೇಳಿದ್ದಾರೆ.

ಹಿರಿಯ ನಟಿಯರಾದ ಜಯಂತಿ ಅಮ್ಮ ವ್ಹೀಲ್ ಚೇರ್ ನಲ್ಲಿ ಬಂದು ಸಿನಿಮಾ ನೋಡಿದ್ದಾರೆ., ನನೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ಹೃದಯ ತುಂಬಿ ಬರುತ್ತಿದೆ ಎಂದು ದರ್ಶನ್ ಶ್ಲಾಘಿಸಿದ್ದಾರೆ,

ಇಂತ ಸಿನಿಮಾ ಮಾಡಲು ಮುನಿರತ್ನ ಅವರಂಥ ನಿರ್ಮಾಪಕರಿಂದ ಮಾತ್ರ ಸಾಧ್ಯ,  ಮುನಿರತ್ನ ಅವರಿಗೆ ಮಾತ್ರ ಈ ತಾಕತ್ತು ಇರುವುದು,  ಏಕೆಂದರೇ ಅವರು ಸಮುದ್ರದ ಅಲೆಯ ವಿರುದ್ಧ ಈಜಿದ್ದಾರೆ,  ಈ ರೀತಿಯ ಸಂಭ್ರಮ ನನ್ನ ಜೀವನದಲ್ಲಿ ಎರಡನೇ ಬಾರಿಗೆ ಬಂದಿದೆ,

ಹಲವು ವರ್ಷಗಳ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಪೌರಾಣಿಕ ಸಿನಿಮಾದಲ್ಲಿ ನಾನು ನಟಿಸಿದ್ದೆ, ಇನ್ನೂ ಉತ್ತರ ಕರ್ನಾಟಕ ಜನತೆಗೆ ದರ್ಶನ್ ಅಭಿನಂದನೆ ಸಲ್ಲಿಸಿದ್ದಾರೆ,. ಅಷ್ಟೊಂದು ಪ್ರವಾಹದಲ್ಲಿ ಸಿಲುಕಿದ್ದರೂ ಸಿನಿಮಾ ವೀಕ್ಷಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿರುವ ದರ್ಶನ್, ಒಳ್ಳೆಯ ಚಿತ್ರ ಕೊಟ್ಟರೇ ಪ್ರೇಕ್ಷಕರು ಮಳೆ, ಬಿಸಿಲು ಯಾವುದನ್ನು ಲೆಕ್ಕಿಸುವುದಿಲ್ಲ ಎಂದು ಹೊಗಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.