ಬಿಡುಗಡೆಗೆ ಮುನ್ನವೇ ಅಬ್ಬರಿಸಿದ ರಾಂಧವ! ಭುವನ್ ಹೊಸ ಚಿತ್ರದ ಟ್ರೇಲರ್ ರಿಲೀಸ್
ಕೊಡಗಿನ ನಟ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಇದೇ ತಿಂಗಳ 23ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನ ಟ್ರೇಲರ್ ಮೂಲಕವೇ ಅಬ್ಬರಿಸುತ್ತಿದೆ

ಕೊಡಗಿನ ನಟ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಇದೇ ತಿಂಗಳ 23ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನ ಟ್ರೇಲರ್ ಮೂಲಕವೇ ಅಬ್ಬರಿಸುತ್ತಿದೆ ಎಂದರೆ ಸುಳ್ಳಲ್ಲ. ಅದ್ಭುತ ಕಥಾನಕವೊಂದರ ಅನಾವರಣ ಮಾಡುವ ಮುನ್ಸೂಚನೆಯನ್ನು ರಾಂಧವ ಟ್ರೇಲರ್ ಸಿನಿ ಪ್ರೇಕ್ಷಕನಿಗೆ ನೀಡಿದೆ.
ಸುನಿಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ರಾಂಧವ ದಲ್ಲಿ ಬಿಗ್ ಬಾಸ್ ಖ್ಯಾತಿಯ ಭುವನ್ ನಾಯಕನಾಗಿದ್ದಾರೆ.ಎರಡು ವರ್ಷಗಳ ನಿರಂತರ ಶ್ರಮದ ಬಳಿಕ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ.ಇದುವರೆಗೆ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೇಲರ್ ಗಳಿಗಿಂತ ಈ ಟ್ರೇಲರ್ ಭಿನ್ನವಾಗಿದ್ದು ಚಿತ್ರ ಒಂದು ಥ್ರಿಲ್ಲರ್ ಕಂ ಹಾರರ್ ಕಥಾನಕವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡಿದೆ.
ಚಿತ್ರದಲ್ಲಿ ಭುವನ್ ಗೆ ಅಪೂರ್ವಾ ಶ್ರೀನಿವಾಸನ್ಜತೆಯಾಗಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


