ಸಿನಿಮಾ ಸುದ್ದಿ

ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಕಿಚ್ಚ ಸುದೀಪ್ ಹೆಸರು; ಸಿಡಿದೆದ್ದ ಜಗ್ಗೇಶ್ ಹೇಳಿದ್ದೇನು?

ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್ ಹೆಸರು ತಳುಕು ಹಾಕಲಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದಾರೆ.

ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಕಿಚ್ಚ ಸುದೀಪ್ ಹೆಸರು; ಸಿಡಿದೆದ್ದ ಜಗ್ಗೇಶ್ ಹೇಳಿದ್ದೇನು?
ಸುದೀಪ್-ಕೋಮಲ್-ಜಗ್ಗೇಶ್
Published On :

ಬೆಂಗಳೂರು: ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್ ಹೆಸರು ತಳುಕು ಹಾಕಲಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಅವರು, ಈ ಪ್ರಕರಣದಲ್ಲಿ ಸುಮ್ಮನೆ ಕಿಚ್ಚ ಸುದೀಪ್ ಹೆಸರನ್ನು ಎಳೆದು ತರಬೇಡಿ. ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ.

ಕಲಾಬಂಧು ಸುದೀಪ್ ಹೆಸರು ಯಾರಾದರೂ ಈ ವಿಷಯದಲ್ಲಿ ಎಳೆದು ತಂದರೆ ಕ್ಷಮೆಯಿಲ್ಲಾ! ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ.. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು..ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ! ಕೆಡಿಸದಿರಿ ಮನಗಳ! ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. 

ಕೋಮಲ್ ಮೇಲಿನ ಹಲ್ಲೆ ಕುರಿತಂತೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಇದು ಯಾರ ಕೈವಾಡ ಇರಬಹುದು ಎಂಬ ಚರ್ಚೆಗಳಾಗುತ್ತಿತ್ತು. ಈ ವೇಳೆ ಹಲ್ಲೆ ಮಾಡಿರುವ ವಿಜಿ ಸುದೀಪ್ ಅವರ ಅಭಿಮಾನಿ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.