ಸಿನಿಮಾ ಸುದ್ದಿ

ಜಗಜಟ್ಟಿಯಾದರೂ, ಪತ್ನಿಗೆ ಪ್ರೀತಿಯ ಗಂಡನೇ..; ಪೈಲ್ವಾನನ ಹೊಸ ಅವತಾರ ನೋಡಿ..!

ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಗೆ ಅವರ ಪತ್ನಿ ಹಾಗೂ ಆಪ್ತ ಗೆಳತಿ ಪ್ರಿಯಾ ಅವರು ಸ್ನೇಹಿತರ ದಿನಕ್ಕೆ ವಿಶೇಷ ಉಡುಗೊರೆ ನೀಡಿದ್ದು, ಈ ಉಡುಗೊರೆ ಇದೀಗ ವೈರಲ್ ಆಗಿದೆ.

ಜಗಜಟ್ಟಿಯಾದರೂ, ಪತ್ನಿಗೆ ಪ್ರೀತಿಯ ಗಂಡನೇ..; ಪೈಲ್ವಾನನ ಹೊಸ ಅವತಾರ ನೋಡಿ..!
ನಟ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ
Published On :
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಗೆ ಅವರ ಪತ್ನಿ ಹಾಗೂ ಆಪ್ತ ಗೆಳತಿ ಪ್ರಿಯಾ ಅವರು ಸ್ನೇಹಿತರ ದಿನಕ್ಕೆ ವಿಶೇಷ ಉಡುಗೊರೆ ನೀಡಿದ್ದು, ಈ ಉಡುಗೊರೆ ಇದೀಗ ವೈರಲ್ ಆಗಿದೆ.
ಇಂದು ಸ್ನೇಹಿತರ ದಿನದ ಪ್ರಯುಕ್ತ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮ ಜೊತೆಗಾರನಿಗೆ ವಿಶೇಷ ಶುಭಾಶಯ ಕೋರಿದ್ದು, ಪ್ರಿಯಾ ಸುದೀಪ್ ತಮ್ಮ ಪತಿ ಸುದೀಪ್ ಅವರನ್ನು 'ಬೆಸ್ಟಿ' ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಅಂತೆಯೇ ಫೋಟೋದೊಂದಿಗೆ ಸುದೀಪ್ ಅವರನ್ನು ಕೀಟಲೆ ಕೂಡ ಮಾಡಿದ್ದು, 'ನನ್ನ ಸ್ನೇಹಿತನೊಂದಿಗೆ ಸಿಲ್ಲಿಯಾಗಿರುವುದು, ಈ ಅವತಾರದಲ್ಲಿ ನಿಮ್ಮ ಪೈಲ್ವಾನ್ ಅನ್ನು ಎಂದಾದರೂ ನೋಡಿದ್ದೀರಾ? ನನ್ನ ಬೆಸ್ಟಿಗೆ ದೊಡ್ಡ ಅಪ್ಪುಗೆ' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಎರಡು ನಗುವ ಎಮೋಜಿಯನ್ನು ಹಾಕಿದ್ದಾರೆ.
ತಮ್ಮ ಪತ್ನಿಯ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಸ್ನೇಹ ಯಾವುದು ಎಂಬುದರ ಬಗ್ಗೆ ಈಗ ಎಲ್ಲರಿಗೂ ಸ್ಪಷ್ಟವಾಗಿದೆ.. ನನ್ನ ಆಪ್ತ ಸ್ನೇಹಿತೆಯಾಗಿದ್ದಕ್ಕಾಗಿ ನಿನಗೆ ದೊಡ್ಡ ಥ್ಯಾಂಕ್ಸ್.. ಎಂದು ಸುದೀಪ್ ಅಷ್ಟೇ ಪ್ರೀತಿಯಿಂದ ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಿಯಾ ಅವರು ಮಾಡಿರುವ ಟ್ವೀಟ್ ನೋಡಿದರೆ, ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದೀಪ್ ಇವರೇನಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಈ ಫೋಟೋ ಮೂಲಕ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅಂತೆಯೇ ಈ ಜೋಡಿ ಹೀಗಾ ಸದಾಕಾಲ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.