'ಮುಂದಿನ ನಿಲ್ದಾಣಕ್ಕೆ' ಮುಖವೇ ಕಾಣದ ಪೋಸ್ಟರ್: ವಿಜಯ್ ಭಾರದ್ವಾಜ್ ಹೊಸ ಪ್ರಯೋಗ!
ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ.

Published On :
ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ತಂಡ ಪೋಸ್ಟರ್ ಮೂಲಕ ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಕಲಾವಿದರ ಮುಖಗಳು ಕಾಣದಂತೆ ಮುಂದಿನ ನಿಲ್ದಾಣದ ಪೋಸ್ಟರ್ ವಿನ್ಯಾಸ ಮಾಡಲಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.
ಆಂಗ್ರಿ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ ಪೋಸ್ಟರ್ ವಿನ್ಯಾಸ ಮಾಡಿದ್ದು, ವಿನಯ್ ಭಾರದ್ವಾಜ್ ಅವರ ಪರಿಕಲ್ಪನೆಯಲ್ಲೇ ಮೂಡಿ ಬಂದಿದೆ.
ಚೂರಿ ಕಟ್ಟೆಯ ಪ್ರವೀಣ್ ತೇಜ್, ರಂಗಿತರಂಗ ನಾಯಕಿ ರಾಧಿಕಾ ಚೇತನ್ ಚಿತ್ರದಲ್ಲಿದ್ದು ಅನನ್ಯ ಕಶ್ಯಪ್ ಗೆ ಇದು ಮೊದಲ ಚಿತ್ರವಾಗಿದೆ. ಮೂರು ವ್ಯಕ್ತಿಗಳ ಲಿಬರೇಟಿಂಗ್ ಜರ್ನಿಯ ಕಥಾ ಹಂದರ ಹೊಂದಿರುವ ಚಿತ್ರ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ.
ಮುಂದಿನ ನಿಲ್ದಾಣಕ್ಕೆ 7 ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದು, ಪಿಕೆಆರ್ ಧ್ವನಿಸುರುಳಿ ಹಕ್ಕುಗಳನ್ನು ಪಡೆದಿದ್ದು ಅಭಿಮನ್ಯು ಸದಾನಂದ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
kannada movieಕನ್ನಡ ಚಿತ್ರPosterಪೋಸ್ಟರ್Mundina Nildanaಮುಂದಿನ ನಿಲ್ದಾಣdirector Vinay Bharadwajನಿರ್ದೇಶಕ ವಿನಯ್ ಭಾರದ್ವಾಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


