ಜಗ್ಗೇಶ್ ಹೇಳಿದ ಬುಲೆಟ್ ಬೈಕ್ ಬಾಂಧವ್ಯದ ಕಥೆ!
ಪ್ರೀಮಿಯರ್ ಪದ್ಮಿನಿ ಬಾಂಧವ್ಯಗಳ ಕುರಿತಾದ ಕಥೆ ಹೊಂದಿರುವ ಚಿತ್ರ ಎನ್ನುವ ನವರಸ ನಾಯಕ ಜಗ್ಗೇಶ್, ತಾವು ವಿಶೇಷವಾದ ಬಾಂಧವ್ಯ ಹೊಂದಿರುವ ಬುಲೆಟ್ ಬೈಕ್ ಬಗ್ಗೆ ಮಾತನಾಡಿದ್ದಾರೆ.

Published On :
ಪ್ರೀಮಿಯರ್ ಪದ್ಮಿನಿ ಬಾಂಧವ್ಯಗಳ ಕುರಿತಾದ ಕಥೆ ಹೊಂದಿರುವ ಚಿತ್ರ ಎನ್ನುವ ನವರಸ ನಾಯಕ ಜಗ್ಗೇಶ್, ತಾವು ವಿಶೇಷವಾದ ಬಾಂಧವ್ಯ ಹೊಂದಿರುವ ಬುಲೆಟ್ ಬೈಕ್ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದಲ್ಲಿ ಪ್ರೀಮಿಯರ್ ಪದ್ಮಿನಿ ಕಾರಿನ ಜೊತೆ ಭಾವನಾತ್ಮಕ ಬಾಂಧವ್ಯ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್, ನಿಜ ಜೀವನದಲ್ಲಿ 1956 ರಲ್ಲಿ ತಯಾರಾದ ಬುಲೆಟ್ ಬೈಕ್ ನೊಂದಿಗೆ ಅಪರೂಪದ ಭಾವನೆಗಳನ್ನು ಹೊಂದಿದ್ದಾರೆ. ಈ ಬುಲೆಟ್ ಬೈಕ್ ನ್ನು ನನ್ನ ತಂದೆ ಉಪಯೋಗಿಸುತ್ತಿದ್ದರು. ನನ್ನ ತಾಯಿ ಹಿಂಬದಿ ಸವಾರರಾಗಿದ್ದರು. ಇಂಗ್ಲೆಂಡ್ ನಲ್ಲಿ ತಯಾರಾದ ಈಗಲೂ ಆ ಬೈಕ್ ನ್ನು ಹೊಂದಿದ್ದೇನೆ, ಈಗ ಮಾರುಕಟ್ಟೆಯಲ್ಲಿ ಅದರ ಬೆಲೆ 15 ಲಕ್ಷ ರೂಪಾಯಿಗಳು. ಇಂಗ್ಲೆಂಡ್ ನ ಕೇಂದ್ರ ಕಚೇರಿಗೆ ಕಳಿಸಿ ಅದನ್ನು ನವೀಕರಣಗೊಳಿಸಿದ್ದೆ. ನನ್ನ ಮೊಮ್ಮಗನೂ ಸೇರಿ ಎಲ್ಲರೂ ಆ ಬೈಕ್ ಬಗ್ಗೆ ವಿಶೇಷ ಭಾವನಾತ್ಮಕ ನಂಟು ಹೊಂದಿದ್ದೇವೆ ಎಂದು ಜಗ್ಗೇಶ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


