ಅಂಬಿ ಪುತ್ರನ 'ಅಮರ್'ಗೆ ಯು/ಎ ಪ್ರಮಾಣಪತ್ರ, ಮೇ ನಲ್ಲಿ ತೆರೆಗೆ
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿರುವ ಚಿತ್ರ "ಅಮರ್" ಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

Published On :
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿರುವ ಚಿತ್ರ "ಅಮರ್" ಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಮೇ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತಯಾರಾಗಿದೆ.
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವು ಅಭಿಷೇಕ್ ಚೊಚ್ಚಲ ಚಿತ್ರವಾಗಿದ್ದು ತಾನ್ಯಾ ಹೋಪ್ ನಾಯಕಿಯಾಗಿ ಅಭಿಷೇಕ್ ಗೆ ಸಾಥ್ ನೀಡುತ್ತಿದ್ದಾರೆ.
ಮೇ ತಿಂಗಳಲ್ಲಿ ಎರಡು ದಿನಾಂಕಗಳನ್ನು ಚಿತ್ರ ಬಿಡುಗಡೆಗೆ ಅಂತಿಮಗೊಳಿಸಲಾಗಿದ್ದು ಇದರಲ್ಲಿ ಒಂದನ್ನು ಫೈನಲ್ ಮಾಡಿದ ನಂತ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಚಿತ್ರ ತಯಾರಕರು ಹೇಳಿಕೆ ನಿಡಿದ್ದಾರೆ.
ಏತನ್ಮಧ್ಯೆ, ಏಪ್ರಿಲ್ 20 ರಂದು ಈ ಚಿತ್ರದ ಎರಡನೆಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ."ಸುಮನೆ" ಹಾಡಿಗೆ ಹಿನ್ನೆಲೆ ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ , ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ಹಿನ್ನಲೆ ಗಾಯಕಾರೈ ಕಾಣಿಸಿಕೊಂಡಿದ್ದಾರೆ.ಸತ್ಯ ಹೆಗಡೆಯ ಛಾಯಾಗ್ರಹಣ ಈ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


