ಸಿನಿಮಾ ಸುದ್ದಿ

ಯಾರದೋ ತಪ್ಪಿಗೆ ಸುಖಾಸುಮ್ಮನೆ ಟ್ರೋಲ್‍ಗೆ ಗುರಿಯಾದ ನಟಸಾರ್ವಭೌಮನ ಬೆಡಗಿ ಅನುಪಮಾ, ಏನಿದು ರಗಳೆ?

ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಅನುಪಮಾ ಅವರು ಮಾಡದ ತಪ್ಪಿಗೆ ಸುಖಾಸುಮ್ಮನೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ಯಾರದೋ ತಪ್ಪಿಗೆ ಸುಖಾಸುಮ್ಮನೆ ಟ್ರೋಲ್‍ಗೆ ಗುರಿಯಾದ ನಟಸಾರ್ವಭೌಮನ ಬೆಡಗಿ ಅನುಪಮಾ, ಏನಿದು ರಗಳೆ?
ಅನುಪಮಾ ಪರಮೇಶ್ವರನ್
Published On :
ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಅನುಪಮಾ ಅವರು ಮಾಡದ ತಪ್ಪಿಗೆ ಸುಖಾಸುಮ್ಮನೆ ಟ್ರೋಲ್ ಗೆ ಗುರಿಯಾಗಿದ್ದಾರೆ. 
ಟ್ರೋಲಿಗರು ತಪ್ಪಾಗಿ ಅರ್ಥೈಸಿ ಪ್ರೇಮಂ ಬ್ಯೂಟಿ ಅನುಪಮಾ ಅವರ ವಿರುದ್ಧ ಬೈಗುಳಗಳ ಕಾಮೆಂಟ್ ಗಳ ಸುರಿಮಳೆಯಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ನಟಸಾರ್ವಭೌಮನ ಚೆಲುವ ಶಿಕ್ಷೆ ಅನುಭವಿಸುವಂತಾಗಿದೆ. 
ಕೇರಳದ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಶಬರಿಮಲೆ ಅಯ್ಯಪ್ಪನ ಹೆಸರು ಹೇಳಿ ಮತ ಕೇಳುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತ್ರಿಶ್ಯೂರ್ ಜಿಲ್ಲಾಧಿಕಾರಿ ಟಿವಿ ಅನುಪಮಾ, ಸುರೇಶ್ ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ಈತನ ಬೆಂಬಲಿಗರನ್ನು ಕೆರಳಿಸಿದೆ. 
ಜಿಲ್ಲಾಧಿಕಾರಿಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದಾಳಿ ನಡೆಸಿರುವ ಸುರೇಶ್ ಬೆಂಬಲಿಗರು, ತಪ್ಪಾಗಿ ನಟಿ ಅನುಪಮಾ ಫೇಸ್ ಬುಕ್ ಪೇಜ್ ನಲ್ಲಿ ದಾಳಿ ಮಾಡಿದ್ದಾರೆ. ಜಿಲ್ಲಾಧಿಕಾರಿಗೂ ನಟಿಗೂ ವ್ಯತ್ಯಾಸ ಕಂಡುಕೊಳ್ಳದ ನೆಟಿಗರು, ಅನುಪಮಾ ಅವರ ಹೊಸ ಚಿತ್ರ ರಾಕ್ಷಸಡು ಪೋಸ್ಟರ್ ಕೆಳಗೆ ಟೀಕೆಗಳ ಸುರಿಮಳೆಗೈದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.