ಸಿನಿಮಾ ಸುದ್ದಿ

'ಕವಚ' ಒಂದು ಉತ್ತಮ ಸಂದೇಶ ಹೊಂದಿರುವ ಭಾವನಾತ್ಮಕ ಚಿತ್ರ: ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಅಭಿನಯದ ಕವಚ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಇಲ್ಲಿ ದೃಷ್ಟಿ ವಿಕಲಚೇತನ ಪಾತ್ರವನ್ನು ...

'ಕವಚ' ಒಂದು ಉತ್ತಮ ಸಂದೇಶ ಹೊಂದಿರುವ ಭಾವನಾತ್ಮಕ ಚಿತ್ರ: ಶಿವರಾಜ್ ಕುಮಾರ್
ಕವಚ ಚಿತ್ರದಲ್ಲಿ ಶಿವರಾಜ್ ಕುಮಾರ್
Published On :
ಶಿವರಾಜ್ ಕುಮಾರ್ ಅಭಿನಯದ ಕವಚ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಇಲ್ಲಿ ದೃಷ್ಟಿ ವಿಕಲಚೇತನ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಅಭಿಮಾನಿಗಳು ನೇತ್ರದಾನ ಶಿಬಿರ ಏರ್ಪಡಿಸಿದ್ದಾರೆ.
ಶಿವರಾಜ್ ಕುಮಾರ್ ಅವರ 120ನೇ ಚಿತ್ರವಿದು. ಈ ಹಿಂದಿನ ನನ್ನ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಪಾತ್ರವನ್ನು ವಹಿಸಿದ್ದೇನೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಕೆಲವೊಂದು ದೃಶ್ಯಗಳಲ್ಲಿ ಮಾತ್ರ ಕುರುಡನ ಪಾತ್ರ ಮಾಡಿದ್ದೆ. ಆದರೆ ಈ ಚಿತ್ರದಲ್ಲಿ ಮಾತ್ರ ಪೂರ್ಣವಾಗಿ ದೃಷ್ಟಿ ವಿಕಲಚೇತನ ಪಾತ್ರ ನಿರ್ವಹಿಸಿದ್ದೇನೆ, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ ಶಿವರಾಜ್ ಕುಮಾರ್,
ಕವಚ ಎಂದರೆ ರಕ್ಷಣೆ ಎಂಬರ್ಥ ಬರುತ್ತದೆ. ಪೋಷಕರು ಮಕ್ಕಳನ್ನು ರಕ್ಷಿಸಲು ನೋಡುತ್ತಾರೆ. ಸಹೋದರರು, ಗಂಡ-ಹೆಂಡತಿ ಹೀಗೆ ಎಲ್ಲ ಸಂಬಂಧಗಳಲ್ಲಿಯೂ ರಕ್ಷಣೆ ಇರುತ್ತದೆ.
ಪ್ರತಿಯೊಬ್ಬರಿಗೂ ಸಂಬಂಧವಾಗುವ ಕಥೆ ಇಲ್ಲಿದೆ. ಯಾರೇ ಅಶಕ್ತರನ್ನು ನಾವು ಅಸಮಾರ್ಥ್ಯರು ಎಂದು ತಿಳಿಯಲು ಸಾಧ್ಯವೇ ಎಲ್ಲ, ಅವರು ಮತ್ತೊಂದು ವಿಚಾರದಲ್ಲಿ ಶಕ್ತರಾಗಿರುತ್ತಾರೆ. ಅದನ್ನು ನನ್ನ ಪಾತ್ರದಲ್ಲಿ ತೋರಿಸಲು ಯತ್ನಿಸಿದ್ದೇನೆ, ಕೌಟುಂಬಿಕ ಭಾವನಾತ್ಮಕ ಚಿತ್ರದಲ್ಲಿ ಒಂದು ಸಂದೇಶವಿದೆ ಎಂದರು ಶಿವರಾಜ್ ಕುಮಾರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.